Subscribe to Updates

    Get the latest creative news from FooBar about art, design and business.

    What's Hot

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಸಂವಾದ ಕಾರ್ಯಕ್ರಮ

    January 28, 2026

    ಎಂ.ಜಿ. ಹೆಗಡೆ ಕೃತಿಗೆ ‘ಗಾಂಧಿ ಸಾಹಿತ್ಯ ಪ್ರಶಸ್ತಿ’

    January 28, 2026

    ಡಾ. ವಸಂತಕುಮಾರ ಪೆರ್ಲ ಇವರಿಗೆ ಹವ್ಯಕ ಸಭಾದಿಂದ ಸನ್ಮಾನ

    January 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏಪ್ರಿಲ್ 09ರಿಂದ 16ರವರೆಗೆ ಸುಳ್ಯದಲ್ಲಿ “ಚಿಣ್ಣರಮೇಳ 2023” – ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರ
    News

    ಏಪ್ರಿಲ್ 09ರಿಂದ 16ರವರೆಗೆ ಸುಳ್ಯದಲ್ಲಿ “ಚಿಣ್ಣರಮೇಳ 2023” – ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರ

    March 25, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    25 ಮಾರ್ಚ್ 2023, ಸುಳ್ಯ: ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಏಪ್ರಿಲ್ 09ರಿಂದ 16ರವರೆಗೆ ನಡೆಯುವ ಚಿಣ್ಣರಮೇಳ 2023 ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ವಿಶೇಷ ಶಿಬಿರವಾಗಿರುತ್ತದೆ. ರಂಗಮಾಂತ್ರಿಕ ಡಾ. ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಕರ್ನಾಟಕದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾಗಿರುವ ಅರವಿಂದ ಕುಡ್ಲ, ನೀನಾಸಂ ಸಂಗೀತ ಭಿಡೆ, ನೀನಾಸಂ ಉಜ್ವಲ್ ಯು.ವಿ., ನೀನಾಸಂ ನವೀನ್ ಕಾಂಚನ, ಮೈಮ್ ರಾಮದಾಸ್, ನೀನಾಸಂ ಬಿಂದು ರಕ್ಷಿದಿ, ಅಕ್ಷತಾ ಕುಡ್ಲ , ಸುಮನಾ ಪ್ರಸಾದ್ ಮೂಡುಬಿದ್ರೆ, ತಾರಾನಾಥ ಕೈರಂಗಳ, ಝುಬೇರ್ ಖಾನ್ ಕುಡ್ಲ , ವಿ.ಕೆ.ವಿಟ್ಲ, ಹರೀಶ್‌ ಅರಸೀಕೆರೆ, ನೀನಾಸಂ ನವೀನ್ ಸಾಣಿಹಳ್ಳಿ, ಭಾಸ್ಕರ ನೆಲ್ಯಾಡಿ, ಶ್ರೀಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಚಂದ್ರಾಡ್ಕರ್, ಧನಂಜಯ ಮರ್ಕಂಜ, ಶಿವಗಿರಿ ಕಲ್ಲಡ್ಕ, ಭಾರತಿ ಕೈರಂಗಳ, ಅತುಲ್ ಭಟ್ ಉಡುಪಿ, ನಾದಾ ಮಣಿನಾಲ್ಕೂರು ಮುಂತಾದವರು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಬಹಳ ಮುಖ್ಯವಾಗಿ ರಂಗಾಭಿನಯ, ಕಥಾರಚನೆ, ಮಾತುಗಾರಿಕೆ, ರಂಗದಾಟಗಳು, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ವರಾನುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು, ಪುಸ್ತಕ ಪ್ರೀತಿ, ಅಂದದ ಹಸ್ತಾಕ್ಷರ, ಪರಿಸರ ಪ್ರೀತಿ, ಪಕ್ಷಿ ಪ್ರಪಂಚ, ಚಿಟ್ಟೆ ಅಧ್ಯಯನ ಸಾಕ್ಷ್ಯಚಿತ್ರ, ಗಗನ ವಿಜ್ಞಾನ, ವಿಜ್ಞಾನದ ಸರಳ ಮಾದರಿಗಳು, ಭಿತ್ತಿಚಿತ್ರ, ಮಕ್ಕಳ ಕಲಾತ್ಮಕ ಚಲನಚಿತ್ರ ಪ್ರದರ್ಶನ, ಕ್ಲೇ–ಕುಂಬಾರಿಕೆ, ವಾದ್ಯವೃಂದ, ಜನಪದ ಸಂಗತಿಗಳು, ನಾಟಕ ತಯಾರಿ ಮತ್ತು ಪ್ರದರ್ಶನ.. ಪ್ರತಿದಿನ ಹಾಡು-ಕುಣಿತದ ಸಂಭ್ರಮ. ಇದಲ್ಲದೆ ಅಗತ್ಯಕ್ಕೆ ತಕ್ಕಷ್ಟು ಕ್ರಾಫ್ಟ್-ಚಿತ್ರಕಲೆ, ಗಾಳಿಪಟ, ಮುಖವರ್ಣಿಕೆಗಳೂ ಸೇರಿದಂತೆ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ, ಧನಾತ್ಮಕ ಚಿಂತನೆಯ ಹಲವು ವಿಚಾರಗಳು ಶಿಬಿರದಲ್ಲಿ ಇರುತ್ತವೆ. ಸಮಾರೋಪದಂದು ಪ್ರತಿಯೊಬ್ಬ ಮಗುವೂ ವೇದಿಕೆಯೇರಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಈ ಹಿಂದೆ ರಂಗಮನೆ ಶಿಬಿರದಲ್ಲಿ ಭಾಗವಹಿಸಿ ಈ ವರ್ಷವೂ ಬರುವ ಮಕ್ಕಳಿಗೆ ಅನೇಕ ಹೊಸ ವಿಚಾರಗಳು ಸಿಗಲಿವೆ.

    ಸ್ವಚ್ಛ ಸುಂದರ ಕಲಾತ್ಮಕ ಪರಿಸರದಲ್ಲಿ ಮೂಡಿ ಬರಲಿರುವ ಈ ಶಿಬಿರದಲ್ಲಿ 6 ರಿಂದ 15 ವರ್ಷದೊಳಗಿನ ಆಸಕ್ತ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ ನೋಂದಾವಣಿ ಆರಂಭಗೊಂಡಿರುತ್ತದೆ. ಎಪ್ರಿಲ್ 02ರಂದು ರಂಗಮನೆಯಲ್ಲಿ ಅರ್ಜಿಯನ್ನು ನೀಡಲಾಗುವುದು ಮತ್ತು ಅದೇ ದಿನ ನೊಂದಾವಣಿ ಕೊನೆಯಾಗಿರುತ್ತದೆ. ಮಾಹಿತಿಗಾಗಿ 9448215946 ಜೀವನ್ ರಾಂ ಸುಳ್ಯ, 9449640013 ಶ್ರೀಹರಿ ಪೈಂದೋಡಿ, 8660306473 ರವೀಶ್ ಪಡ್ಡಂಬೈಲ್, 9449331609 ಪ್ರಸನ್ನ ಐವರ್ನಾಡು ಇವರನ್ನು ಸಂಪರ್ಕಿಸಬಹುದು ಎಂದು ರಂಗಮನೆಯ ಪದಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ಮತ್ತು ಡಾ. ವಿದ್ಯಾ ಶಾರದ ತಿಳಿಸಿರುತ್ತಾರೆ.

    ಜೀವನ ಪಾಠ ಕಲಿಸುವ ರಂಗಮನೆ ಚಿಣ್ಣರಮೇಳ
    32 ವರ್ಷದ ನನ್ನ ರಂಗ ಬದುಕಿನಲ್ಲಿ ಲಕ್ಷಕ್ಕಿಂತ ಹೆಚ್ಚು ಮಕ್ಕಳೊಂದಿಗೆ ಮಕ್ಕಳಾಗಿ ಅಭಿನಯ, ಆಟ, ಹಾಡು, ಕುಣಿತ, ಜಾದೂ, ನಾಟಕ ಅಂತ ಪ್ರೀತಿಯಿಂದ ಕಲಿಸುತ್ತಾ ಕಲಿಯುತ್ತಾ ಬೆಳೆದವನು ನಾನು. ಈ ನನ್ನ ದೀರ್ಘ ರಂಗಾನುಭವದ ಆಧಾರದಲ್ಲಿ ಪ್ರತಿವರ್ಷವೂ ಶಿಬಿರವನ್ನು ಭಿನ್ನವಾಗಿ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಶಿಬಿರದ ವಿಷಯಗಳು ಎಂದೂ ಮಕ್ಕಳಿಗೆ ಹೊರೆ ಆಗದಂತೆ ಎಚ್ಚರ ವಹಿಸುತ್ತೇನೆ. ರಂಗಮನೆಯ ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ, ದೇಸೀ ಕಲೆಯ ಬಗ್ಗೆ ಅವರಲ್ಲಿ ಆಸಕ್ತಿ ಹೆಚ್ಚಿಸುವ, ಮಕ್ಕಳು ಅನ್ನ ಮತ್ತು ನೀರಿನ ಮಹತ್ವವನ್ನು ಅರಿಯುವ, ಜೀವನ ಪಾಠವನ್ನು ಕಲಿಯುವ ಶಿಬಿರವಾಗುವತ್ತ ಹೆಚ್ಚು ಗಮನ ಹರಿಸುತ್ತೇನೆ. ಕಳೆದ ವರ್ಷ 306 ಮಕ್ಕಳು ಭಾಗವಹಿಸಿದ್ದರು. ವ್ಯವಸ್ಥೆ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ದೃಷ್ಟಿಯಿಂದ ಈ ವರ್ಷ ಸಂಖ್ಯೆಯನ್ನು ಅರ್ಧದಷ್ಟು ಇಳಿಸಿದ್ದೇವೆ. ರಂಗಮನೆಯಲ್ಲಿ ಇದು 22ನೇ ವರ್ಷದ ಶಿಬಿರ. ಇದೀಗ ರಂಗಮನೆಯ ಚಿಣ್ಣರಮೇಳ ರಾಜ್ಯಕ್ಕೆ ಮಾದರಿ ಶಿಬಿರವಾಗಿದೆ. ಎಪ್ರಿಲ್ 21ರಿಂದ ಕಾರ್ಕಳ ಯಕ್ಷ ರಂಗಾಯಣದಲ್ಲಿ ಹಾಗೂ ಮೇ.01ರಿಂದ ಮೂಡುಬಿದ್ರೆ ಅಳ್ವಾಸ್ ನಲ್ಲಿ ಚಿಣ್ಣರಮೇಳ ನಡೆಸಲಿದ್ದೇನೆ.

    • ಜೀವನ್ ರಾಂ ಸುಳ್ಯ
      ಅಧ್ಯಕ್ಷರು, ರಂಗಮನೆ

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷ ರಂಗಾಯಣ ಕಾರ್ಕಳದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
    Next Article ಕಾಸರಗೋಡಿನಲ್ಲಿ ಪುಸ್ತಕ ಪ್ರೀತಿ ಬರಹ ಕಮ್ಮಟ
    roovari

    Add Comment Cancel Reply


    Related Posts

    ಕಲಾರಾಧಕರನ್ನು ಮಂತ್ರಮುಗ್ಧರನ್ನಾಗಿಸಿದ ‘ನೃತ್ಯೋತ್ಕ್ರಮಣ’ ಭರತನಾಟ್ಯ ಕಾರ್ಯಕ್ರಮ

    January 19, 2026

    ವಿಮರ್ಶೆ | ಗಾನ ಮೋಡಿ- ‘ಸಂಭ್ರಮ’ ಪ್ರಶಸ್ತಿ – ಸಾರ್ಥಕ ‘ನಿರಂತರ’ ಕಲಾಸಾಧನೆ

    January 8, 2026

    ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ‘ಕಲಾಪರ್ಬ’ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ | ಜನವರಿ 09ರಿಂದ 11

    January 5, 2026

    ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ‘ಬ್ಯಾರಿ ಸಾಹಿತ್ಯ ಸಮ್ಮೇಳನ’ | ಜನವರಿ 04

    January 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.