Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಮನಸಾ ‘ರಂಗ ಹಬ್ಬ – 12’ 
    Uncategorized

    ಸುಮನಸಾ ‘ರಂಗ ಹಬ್ಬ – 12’ 

    February 24, 2024Updated:February 27, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಉಡುಪಿ : ಸುಮನಸಾ ಕೊಡವೂರು ಆಯೋಜಿಸುವ ನಾಟಕ ಉತ್ಸವ ‘ರಂಗ ಹಬ್ಬ-12’ ದಿನಾಂಕ 25-02-2024 ರಿಂದ 02-03-2024ರ ವರೆಗೆ ಉಡುಪಿಯ ಅಜ್ಜರ ಕಾಡಿನಲ್ಲಿರುವ ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
    ದಿನಾಂಕ : 25-02-2024 – ‘ಸರಸ ವಿರಸ ಸಮರಸ’- ಕನ್ನಡ ನಾಟಕ
    ತಂಡ : ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು
    ರಚನೆ : ವಿಲಿಯಂ ಶೇಕ್ಸ್ ಪಿಯರ್,
    ಅನುವಾದ – ಕೆ. ಎಸ್. ರಂಗೇ ಗೌಡ
    ನಿರ್ದೇಶನ : ಜೋಸೆಫ್ ಜಾನ್
    ‘ಸರಸ ವಿರಸ ಸಾಮರಸ’ : ವಿಲಿಯಂ ಶೇಕ್ಸ್ ಪಿಯರ್ ರವರ ನಲಿವಿನ ನಾಟಕಗಳಲ್ಲಿ ಒಂದಾಗಿರುವ ‘The Taming of the Shrew’ ನಾಟಕವು ‘ಸರಸ ವಿರಸ ಸಮರಸ’ ನಾಟಕವಾಗಿ ಕನ್ನಡಕ್ಕೆ ಅನುವಾದ ಗೊಂಡಿರುವ ಒಂದು ವಿಶಿಷ್ಟ ರಂಗ ಪ್ರಯೋಗ.
    ಮೂಲ ನಾಟಕದಲ್ಲಿ ನಾಯಕ ಪೆಟ್ರೋಷಿಯೋ ಗಯ್ಯಾಳಿ ನಾಯಕಿ ಕ್ಯಾಥರೀನಳನ್ನು ತನ್ನದೇ ಶೈಲಿಯಲ್ಲಿ ಪಳಗಿಸಿ ಅವಳನ್ನು ಒಳ್ಳೆಯವಳನ್ನಾಗಿ ಪರಿವರ್ತಿಸುತ್ತಾನೆ. ಆದರೆ ಈ ನಾಟಕದಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನತೆಯನ್ನು ಸಾರಿ ಸಮರಸವೇ ಜೀವನ ಎಂಬ ಸಂದೇಶ ನೀಡುವ ಪ್ರಯತ್ನವನ್ನು ಅನುವಾದಕರು ನಡೆಸಿದ್ದಾರೆ.
    ಪರಿವರ್ತನೆ ಜಗದ ನಿಯಮ ಆದರೆ ಇದು ಕೇವಲ ಪ್ರಾಕೃತಿಕ ಜಗತ್ತಿಗೆ ಮಾತ್ರ ಸೀಮಿತವಾಗಿರದೆ ಶೇಕ್ಸ್ ಪಿಯರಿನ ಯ  ನಾಟಕದ ಪಾತ್ರಗಳಲ್ಲಿಯೂ ಪ್ರಕಟಗೊಂಡಿರುವುದನ್ನು ಅವನ ನಾಟಕದಲ್ಲಿಯೂ ಕಾಣಬಹುದಾಗಿದೆ. ಈ ಜಗವೊಂದು ನಾಟಕ ರಂಗ ನಾವೆಲ್ಲರೂ ಪಾತ್ರಧಾರಿಗಳು ಎಂಬುದು ಅವನ ಪ್ರುಸಿದ್ಧ ಉಕ್ತಿಯಾಗಿದ್ದರೂ ನಾಟಕದೊಳಗೊಂದು ನಾಟಕ, ನಾನಾವೇಷ, ಬಗೆ ಬಗೆ ಆಟ, ಸಾಮಾಜಿಕ, ಆರ್ಥಿಕ ಚಿಂತನೆಗಳ ಒಳನೋಟವನ್ನು ಈ ನಾಟಕವು ಪ್ರತಿಬಿಂಬಿಸುತ್ತದೆ.
     ಸ್ತ್ರೀ ದ್ವೇಷಿ ನಾಟಕವೆಂಬ ಹಣೆಪಟ್ಟಿ ಕಳಚಿ ಶೇಕ್ಸ್ ಪಿಯರಿನ ನಾಟಕದ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಕನ್ನಡಕ್ಕೆ ಅನುವಾದಿಸಲಾಗಿದ್ದು ಸರಸ ವಿರಸದ ಈ ಜೀವನದ ಹಾದಿಯಲ್ಲಿ ಪರಿವರ್ತನೆ ಯೊಂದಿಗೆ ಸಮರಸದ ಬಾಳ್ವೆಯನ್ನು ಈ ನಾಟಕ ಪ್ರತಿಪಾದಿಸುತ್ತದೆ.
    ದಿನಾಂಕ : 26-02-2024 – ‘ದೇವಸೂರ’ – ಕನ್ನಡ ನಾಟಕ
    ತಂಡ : ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ, ಸವದತ್ತಿ
    ಕಥೆ : ಶ್ರೀಧರ ಗಸ್ತಿ
    ರಚನೆ ಮತ್ತು ನಿರ್ದೇಶನ : ಝಕೀರ ನದಾಫ್
    ದೇವಸೂರ : ಉತ್ತರ ಕರ್ನಾಟಕದ ಪ್ರಸಿದ್ಧ ತಿಂಥಣಿಯಲ್ಲಿ ನಡೆಯುವ ಈ ಕಥೆಯು ಕಾಲ್ಪನಿಕವಾಗಿರುತ್ತದೆ. ಜಾತ್ರೆಯಲ್ಲಿ ದೇವರ ಕುದುರೆಯನ್ನು ಸವಾರಿ ಮಾಡುವ ವ್ಯಕ್ತಿ ಆಕಸ್ಮಿಕವಾಗಿ ತೀರಿ ಹೋದಾಗ ಹಳ್ಳಿಯ ಜನರು ಗಾಬರಿಗೊಂಡು ಅದನ್ನು ಅಪಶಕುನವೆಂದು ನಂಬುತ್ತಾರೆ. ದೇವರ ಕುದುರೆಯನ್ನು ಸವಾರಿ ಮಾಡುವುದು ಸಾಮಾನ್ಯರಿಗೆ ಅಸಾಧ್ಯವಾಗಿರುವ ಕಾರಣ ಕುದುರೆ ಸವಾರಿ ಮಾಡುವ ವ್ಯಕ್ತಿಗೆ ಬಹುಮಾನವನ್ನು ಘೋಷಿಸಿದಾಗ ಕೆಳಜಾತಿಯ ವ್ಯಕ್ತಿಯೊಬ್ಬ ಬಂದು ಕುದುರೆ ಸವಾರಿ ಮಾಡುತ್ತಾನೆ. ಇದನ್ನು ಆ ಊರಿನ ಮೇಲ್ವರ್ಗದ ಜನ ಅವಮಾನವೆಂದು ಭಾವಿಸಿ ಅವನ ಕುಟುಂಬದ ಮೇಲೆ  ದೌರ್ಜನ್ಯವೆಸಗುತ್ತಾರೆ.  ಮಾತ್ರವಲ್ಲದೆ ಕುದುರೆ ಸವಾರಿ ಮಾಡಿದ ವ್ಯಕ್ತಿಯ ತಾಯಿಯನ್ನು ಕೊಂದು ಹಾಕುತ್ತಾರೆ. ಅದಕ್ಕೆ ಪ್ರತಿಯಾಗಿ ಕೆಳಜಾತಿಯ ವ್ಯಕ್ತಿ ಸೇಡಿನ ಪ್ರತಿಕಾರ ತೀರಿಸಿಕೊಳ್ಳದೆ ತಾಯಿಯ ಕೊಲೆಗೆ ಕಾರಣನಾದ ವ್ಯಕ್ತಿಯನ್ನು ಕ್ಷಮಿಸುತ್ತಾನೆ. ನಾಟಕವು ಹಿಂಸೆಗೆ ಹಿಂಸೆಯೇ ಉತ್ತರವಲ್ಲ ಎಂಬುದನ್ನು ಸಾರುವುದರ ಜೊತೆಗೆ ಹಳ್ಳಿಗಳಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ. ಉತ್ತರ ಕರ್ನಾಟಕದ ಸಂಪ್ರದಾಯಗಳು ಈ ನಾಟಕದ ಹೂರಣವಾಗಿವೆ.
    ದಿನಾಂಕ : 27-02-2024- ಅಗ್ನಿ ಮತ್ತು ಮಳೆ -ಕನ್ನಡ ನಾಟಕ
    ತಂಡ : ನಗ್ನ ಥೇಟರ್, ಉಡುಪಿ
    ರಚನೆ : ಗಿರೀಶ್ ಕಾರ್ನಾಡ್
    ನಿರ್ದೇಶನ :ಅಭಿನವ ಗ್ರೋವರ್
    ಪೌರಾಣಿಕ ಕಥಾವಸ್ತು ಹೊಂದಿರುವ ’ಅಗ್ನಿ ಮತ್ತು ಮಳೆ’ ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ.
    ನಿಷಾಧರ ಹೆಣ್ಣು ’ನಿತ್ತಿಲೆ’ ಈ ನಾಟಕದ ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್‌ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
    ದಿನಾಂಕ : 28-02-2024 – ಯಕ್ಷ ನಾಟಕ – ಸಮುದ್ರೋಲ್ಲಂಘನೆ – ಕನ್ನಡ
    ತಂಡ : ಸುಮನಸಾ ಕೊಡವೂರು
    ನಿರ್ದೇಶನ : ಗುರು ಬನ್ನಂಜೆ ಸಂಜೀವ ಸುವರ್ಣ
    ಸಮುದ್ರೋಲ್ಲಂಘನೆ : ರಾಮಾಯಣದ ಕಥಾಭಾಗದ ಪಂಚವಟಿಯನ್ನು ಯಕ್ಷರೂಪಕವಾಗಿದ್ದರೆ…. ಸಮುದ್ರೋಲಂಘನ ಯಕ್ಷಗಾನ… ರೂಪಕ ಯಕ್ಷಗಾನದ ಸಮ್ಮಿಲನದಲ್ಲಿ ಯಕ್ಷಗಾನ ರೂಪಕ.. ಯಕ್ಷಗಾನ ಮೊದಲ ಹಂತವಾದರೆ ಎರಡನೇ ಹಂತದಲ್ಲಿ ಯಕ್ಷರೂಪಕ…. ಗುರುಗಳಾದ ಸಂಜೀವ ಸುವರ್ಣರ ಗರಡಿಯಲ್ಲಿ ಪಳಗಿದ ಸುಮನಸ ಸದಸ್ಯರ ಪ್ರಸ್ತುತಿ.
    ದಿನಾಂಕ : 29-02-2024 – ಅಂಬೆ – ಕನ್ನಡ ನಾಟಕ
    ತಂಡ : ನಮ ತುಳುವೆರ್, ಮುದ್ರಾಡಿ
    ರಚನೆ : ಡಾ. ಸರಜೂ ಕಾಟ್ಕರ್
    ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ
    ಅಂಬೆ : ಶೌರ್ಯವೊಂದೇ ಹೆಣ್ಣನ್ನು ಗೆಲ್ಲುವ ಸಾಧನವೆಂದು ತಿಳಿದಾತ. ಅನೇಕ ಬಗೆಯ ಅವಮಾನಗಳ ನೋವುಗಳನ್ನು ತಿಂದು ಅಗ್ನಿಯಲ್ಲಿ ಬೆಂದು ಉರಿದು ಹೋದ ಮಹಾಭಾರತದ ಅಂಬೆಯ ಕಥಾನಕ ಎಂಥವರ ಮನಸ್ಸನ್ನೂ ಕಲಕೀತು. ಸ್ವಯಂವರ ಎಂಬುದು ಅಂಬೆಯ ಪಾಲಿಗೆ ಘೋರವಾಗಿ ಪರಿಣಮಿಸಿ ಅವಳ ಇಚ್ಚೆಗೆ ವಿರುದ್ಧವಾಗಿ ಬದುಕಲು ಪರಿಸ್ಥಿತಿ ಒತ್ತಾಯಿಸಿದಾಗ ಬಂಡೇಳುತ್ತಾಳೆ. ಯಾರ ಕೈಗೊಂಬೆಯೂ ಆಗದೆ ಬದುಕುವ ನಿರ್ಧಾರ ಮಾಡಿದರೂ ಗಂಡು ರೂಪಿಸಿರುವ ಈ ಸಮಾಜ ವ್ಯವಸ್ಥೆ ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಭೀಷ್ಮನ ಪಿತೃ ಪ್ರಧಾನ ಸಮಾಜದ ಪ್ರತಿಪಾದನೆ? ತನ್ನ ಕೃತ್ಯಕ್ಕೆ ಶಾಸ್ತ್ರಸಮ್ಮತಿಯ ಮುದ್ರೆ ಇರುವುದರಿಂದ ತಾನು ಸರಿಯೆಂಬ ಧೋರಣೆ ಅವನಲ್ಲಿದೆ ಆದರೂ ಅದರ ಜೊತೆ ಅಧಿಕಾರದ ರಾಜಕಾರಣದ ಬಲಿ ಪಶುವೂ ಹೌದು. ಸಾಲ್ವ ಒಲಿದು “ಕೈ ಬಿಡಲಾರೆ” ಎಂಬ ಮಾತು ಕೊಟ್ಟವನು. ಆದರೆ ಇಚ್ಛೆ ಇಲ್ಲದೆ ಒತ್ತಾಯದಿಂದ ರಥ ಏರಿ ಬಲಿಪಶುವಾದ ಹೆಣ್ಣನ್ನು ವರಿಸಲು ತನಗೆ ಅವನ ಗಂಡು ಅಹಂ ಸಮ್ಮತಿಸುವುದಿಲ್ಲ. ಕಾಶಿರಾಜ ರಾಜಕಾರಣದ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸಲಾರ. ಇಂಥ ಪಿತೃ ಪ್ರಧಾನ ಸಮಾಜದ ಧೋರಣೆಯನ್ನು ತಿರಸ್ಕರಿಸಿ ಅಂಬೆ ತಾನು ಅಂದುಕೊಂಡಂತೆ ಬದುಕಲು ಇಚ್ಚಿಸಿ ಅದಕ್ಕಾಗಿ ಎಲ್ಲಾ ಪ್ರಯತ್ನದಲ್ಲಿ ವಿಫಲಳಾಗಿ ಕಡೆಗೆ ಬೆಂಕಿಗೆ ಆಹುತಿಯಾಗುತ್ತಾಳೆ. ಗಂಡಿನ ದಬ್ಬಾಳಿಕೆಯನ್ನು ಕಣ್ಣಾರೆ ಕಂಡಿರುವ ಕಾರಣ, ಭೀಷ್ಮನನ್ನು ಮುಗಿಸಲು ಗಂಡಾಗಿ ಹುಟ್ಟಬಾರದು ಹೆಣ್ಣಾಗಿ ಹುಟ್ಟುವೆನೆಂದರೆ ಪ್ರಕೃತಿಯೇ ದೇಹಕ್ಕೆ ಅನ್ಯಾಯ ಮಾಡಿದೆ. ಆದ್ದರಿಂದ ಗಂಡು ಅಲ್ಲದ ಹೆಣ್ಣು ಅಲ್ಲದ ಶಿಖಂಡಿಯಾಗಿ ಹುಟ್ಟಿ ಮುಂದಿನ ಜನ್ಮದಲ್ಲಿ ಭೀಷ್ಮನ ಇಚ್ಚೆಗೆ ಮಂಗಳ ಹಾಡುವ ಸಂಕಲ್ಪದೊಂದಿಗೆ ಉರಿದು ಬೂದಿಯಾಗುತ್ತಾಳೆ. ಈ ಜನ್ಮದಲ್ಲಿ ಇದ್ದು ತಾನು ಅಂದುಕೊಂಡಂತೆ ಬದುಕುವ ಸ್ವಾತಂತ್ರ್ಯದ ಸಂಬಂಧವೊಂದು ಯಾರದೋ ಇಚ್ಛೆಗಾಗಿ ಸುಟ್ಟು ಕರಕಲಾಗಿ ಹೋದ ಪ್ರತೀಕವೆಂಬಂತೆ ಈ ಹೆಣ್ಣಿನ ಕಣ್ಣೀರಿನ ನೋವಿನ ಕಥೆ ನಮ್ಮ ಕಾಲದ ಕಥೆಯಾಗಿಯೂ ಸದಾ ಕಾಡುತ್ತಾ ಬಂದಿದೆ.
    ದಿನಾಂಕ : 01-03-2024 – ಕರಿಯ ದೇವರ ಹುಡುಕಿ – ಕನ್ನಡ ನಾಟಕ
    ತಂಡ : ಸಮುದಾಯ, ಬೆಂಗಳೂರು
    ರಚನೆ : ಪ್ರೊ. ಜಿ. ಶಂಕರ ಪಿಳ್ಳೆ
    ಅನುವಾದ : ನಾ. ದಾಮೋದರ ಶೆಟ್ಟಿ
    ನಿರ್ದೇಶನ : ನಿರಂಜನ ಖಾಲಿಕೊಡ
    ಕರಿಯ ದೇವರ ಹುಡುಕಿ : ಇದೊಂದು ಅನ್ವೇಷಣೆಯ ಕಥೆ. ತಮ್ಮ ದೇವರಾದ ‘ಕರಿಯ ದೇವರ’ನ್ನು ಹುಡುಕಿಕೊಂಡು, ದಾರಿ ಅರಿಯದ ಮಾರ್ಗದರ್ಶಿಯ ನಂಬಿಕೊಂಡು ಹೊರಡುವ ಐವರು ಸಹೋದರರ ಕಥೆಯಿದು. ಈ ಅನ್ವೇಷಣೆಯಲ್ಲಿ ಈ ಸಹೋದರರು ದಾರಿತಪ್ಪಿ ತಮ್ಮ ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಧರ್ಮಾಂಧರಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಇಂತಹ ಒಂದು ಕಥೆಯ ಎಳೆಯಲ್ಲಿ ನಾಟಕಕಾರರು, ಪ್ರಕೃತಿ, ಲಿಂಗ ಅಸಮಾನತೆ, ಮತೀಯವಾದ,
    ಮೂಢನಂಬಿಕೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯಾವುದೋ ಒಂದು ಸಿದ್ಧಾಂತ ಅಥವಾ ಧರ್ಮದ ಬಗೆಗೆ ತೀವ್ರವಾಗಿ ಹಚ್ಚಿಕೊಂಡು ಮತಾಂಧರಾದವರ ದುರಂತದ ಕಥೆಯೇ ಈ ನಾಟಕ.
    ದಿನಾಂಕ : 02-03-2024 – ಶಿಕಾರಿ – ತುಳು ನಾಟಕ
    ತಂಡ : ಸುಮನಸಾ ಕೊಡವೂರು,
    ರಚನೆ : ರವಿಕುಮಾರ್ ಕಡೆಕಾರ್
    ನಿರ್ದೇಶನ : ವಿದ್ದು ಉಚ್ಚಿಲ್
    ಶಿಕಾರಿ : ಇತ್ತೀಚಿನ ಕಾಲಘಟ್ಟದಲ್ಲಿ ವಿಸ್ತಾರವಾದ ಹರವಿನಲ್ಲಿ ತೆರೆದುಕೊಳ್ಳುತ್ತಾ ವಿಭಿನ್ನವಾಗಿ ಗುರುತಿಸಿಕೊಂಡು ಮನರಂಜನೆಗೆ ಸಾಕ್ಷಿಯಾಗಿ ನಿಲ್ಲುವ ಅಪರೂಪದ ರಂಗ ಕಾಣಿಕೆಯಾಗಿದೆ. ಹಾಸ್ಯಮಯ ರಂಗ ಸನ್ನಿವೇಶವನ್ನು ಸೃಷ್ಟಿಸಿ ತನ್ಮೂಲಕ ನಾಟಕದ ಮೂಲ ಉದ್ದೇಶವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಪ್ರಸ್ತುತಿಯ ಕೊನೆಯ ದೃಶ್ಯದಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ನೀಡುವ ಕಥಾನಕವನ್ನು ಪ್ರೇಕ್ಷಕರಿಗೆ ರಸದೌತಣವಾಗಿಸುವ ಪ್ರಯತ್ನ ‘ಶಿಖಾರಿ’ಯಲ್ಲಿದೆ.
    ಪ್ರಸ್ತುತ ದಿನಗಳಲ್ಲಿ ಸಮಾಜಕ್ಕೆ ಸವಾಲು ಮತ್ತು ಕಂಠಕವಾಗಿರುವ ಮಾನವ ಕಳ್ಳ ಸಾಗಣೆ ಅದರಲ್ಲೂ ಹೆಣ್ಣು ಮಕ್ಕಳ ದುರುಪಯೋಗದ ವಿರುದ್ದ ಧ್ವನಿ ಎತ್ತುವ ಕುರಿತಾದ ಕಥಾಹಂದರ ‘ಶಿಕಾರಿ’ಯದ್ದಾಗಿದೆ. ಕೆಟ್ಟ ಕೆಲಸ ಮಾಡುವವರು ನಮ್ಮ ನಡುವೆಯೇ ಇದ್ದಾರೆ. ಅಂಥಹ ದುಷ್ಟರನ್ನು ಕಾನೂನು ಕಾಯ್ದೆಯ ಮೂಲಕ ‘ಶಿಕಾರಿ’ ಮಾಡಿದರೆ ಸ್ವಚ್ಚಂದ ಸಮಾಜವನ್ನು ಸೃಷ್ಟಿಸಬಹುದೆನ್ನುವುದನ್ನು ನಾಟಕ ತಿಳಿಸುತ್ತದೆ.
    ರಂಗ ಪ್ರಕ್ರಿಯೆಯ ಓಘಕ್ಕೆ ತಡೆ ಒಡ್ಡದೆ ಏಕತಾನತೆಯ ಅನುಭೂತಿಗೆ ಅವಕಾಶವೇ ಸಿಗದಂತೆ ಭರ್ಜರಿಯಾಗಿಯೇ ರಂಗದ ಮೇಲೆ ಶಿಕಾರಿ ನಡೆಯುತ್ತದೆ. ಪ್ರಸ್ತುತ ಸಾಮಾಜಿಕ ಸನ್ನಿವೇಶಕ್ಕೆ ಪ್ರತಿಸ್ಪಂದಿಸುವ ರೀತಿಯಲ್ಲಿ ಹೇಳಬೇಕಿರುವುದನ್ನು ಪಾತ್ರಗಳ ಮೂಲಕ ಗಟ್ಟಿದನಿಯಲ್ಲಿ ಹೇಳಿಸಲಾಗಿದೆ. ‘ಶಿಕಾರಿ’ ಘನಘೋರ ಕಾಡಿನಲ್ಲಿಯೇ ನಡೆಯಬೇಕೆಂದಿಲ್ಲ….. ನಟ್ಟ ನೇಸರನ ನಾಡಿನಲ್ಲಿಯೂ ನಡೆಯಬಹುದೆಂಬ ಪ್ರಜ್ಞೆಯನ್ನು ನೀಡಿ ತತ್ಸಂಬಂಧಿತ ಜಾಗೃತಿಯನ್ನು ಯುವ ಮನಸುಗಳಲ್ಲಿ ಮೂಡಿಸಬೇಕಾದ ಅವಶ್ಯಕತೆಯನ್ನು ಸಮಾಜಕ್ಕೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ‘ಶಿಕಾರಿ’ ನಾಟಕ ಮಾಡುತ್ತದೆ. ಪಾತ್ರಗಳ ಭಾವಾಭಿನಯ, ಸಂಗೀತ, ಬೆಳಕಿನ ಸಂಯೋಜನೆ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸಕ್ಕೂ ‘ಶಿಕಾರಿ’ಯ ಯಶಸ್ಸಿನಲ್ಲಿ ಮಹತ್ವದ ಪಾಲಿದೆ. ದುಷ್ಟಕೂಟದ ‘ಶಿಕಾರಿ’ಯಿಂದ ಮುಗ್ದ ಮನಸುಗಳನ್ನು ರಕ್ಷಿಸುವ ತೇಜೋಪ್ರಹಾರಿಯಾಗಲಿ ಎಂಬ ಸತ್ಯ ಆಶಯವನ್ನು ನಾಟಕ ಹೊಂದಿದೆ.

    Share. Facebook Twitter Pinterest LinkedIn Tumblr WhatsApp Email
    Previous Article‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ರೆಮೊನಾ ಇವೈಟ್ ಪಿರೇರ ಇವರ ನೃತ್ಯ ಪ್ರದರ್ಶನ | ಫೆಬ್ರವರಿ 26
    Next Article ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ – ‘ಯಕ್ಷೋತ್ಸವ-2024’ 
    roovari

    Add Comment Cancel Reply


    Related Posts

    ಸಂಭ್ರಮದಿಂದ ನಡೆದ ‘ಸಮರ್ಪಣಂ ಕಲೋತ್ಸವ – 2025’

    April 4, 2025

    ಸುಲೋಚನಾ ಪಿ. ಕೆ. ಇವರ ‘ಸತ್ಯದರ್ಶನ’ ಕೃತಿಗೆ ‘ಜಿ. ಪಿ. ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ’

    March 22, 2025

    ಜಾಗೃತಿ ಟ್ರಸ್ಟ್ ವತಿಯಿಂದ ‘ಯೋಗಪಥ’ ಕಾದಂಬರಿ ಲೋಕಾರ್ಪಣೆ ಮತ್ತು ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ | ಫೆಬ್ರವರಿ 25

    February 22, 2025

    ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನದಲ್ಲಿ ‘ವಾಣಿ ಸ್ಮರಣೆ’ ಒಂದು ಸ್ಮರಣೀಯ ಕಾರ್ಯಕ್ರಮ | ಫೆಬ್ರವರಿ 25

    February 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.