Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » 3ನೇ ದಿನದ ಸುಮನಸ ರಂಗ ಹಬ್ಬ – ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
    Drama

    3ನೇ ದಿನದ ಸುಮನಸ ರಂಗ ಹಬ್ಬ – ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ

    March 1, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    01 ಮಾರ್ಚ್ 2023, ಉಡುಪಿ: ಸಾಮಾಜಿಕ ನೆರವಿಗಾಗಿ ಹುಟ್ಟಿ ಸಾಂಸ್ಖೃತಿಕ ಸಂಘಟನೆಯಾದ ಸುಮನಸಾ: ಜಯಕರ ಶೆಟ್ಟಿ
    ತನ್ನೂರಿನಲ್ಲಿ ಅವಘಡ ಉಂಟಾದಾಗ ಅವರ ನೆರವಿಗೆ ಸಮಾನ ಮನಸ್ಕರು ಒಟ್ಟಾಗಿ ಕಟ್ಟಿದ ಸಂಸ್ಥೆ ಸುಮನಸಾ ಇಂದು ಸಾಮಾಜಿಕ ಕಳಕಳಿಯನ್ನು ಮುಂದುವರಿಸುತ್ತಾ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬೇರೆ ಬೇರೆ ವಯೋಮಾನದವರು 60ಕ್ಕೂ ಅಧಿಕ ಮಂದಿ ಈ ಸಂಸ್ಥೆಯಲ್ಲಿದ್ದಾರೆ. ಇಷ್ಟೊಂದು ಶಿಸ್ತುಬದ್ಧವಾದ ತಂಡ ಮತ್ತೊಂದಿಲ್ಲ. ಈ ತಂಡದ ಶಿಸ್ತೇ ಬೇರೆಯವರಿಗೆ ಮಾದರಿ ಎಂದು ಶ್ಲಾಘಿಸಿದರು. ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಸುಮನಸಾ ತಂಡವು ರಂಗಭೂಮಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಇಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರಿಗೆ ರಂಗಸನ್ಮಾನ ನೀಡಿರುವುದು ತುಳುಕೂಟಕ್ಕೆ ನೀಡಿದ ಗೌರವ ಎಂದು ತಿಳಿಸಿದರು.

    ರಂಗ ಸನ್ಮಾನ ಸ್ವೀಕರಿಸಿದ ಗಂಗಾಧರ ಕಿದಿಯೂರು ಮಾತನಾಡಿ, ‘ತುಳುಕೂಟ ಉಡುಪಿ, ಬೈದ್ಯಶ್ರೀ ಸಂಶೋಧನಾ ಕೇಂದ್ರ ಈ ಎರಡು ಸಂಘಟನೆಗಳು ನನ್ನನ್ನು ಬೆಳೆಸಿವೆ. ಸುಮನಸಾದ ಅನೇಕ ಸದಸ್ಯರು ನನ್ನ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದವರೇ ಆಗಿದ್ದಾರೆ’ ಎಂದು ನೆನಪಿಸಿಕೊಂಡರು. ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ಮಾತನಾಡಿ, ‘ಕೊಡವೂರಿನಲ್ಲಿ ಹುಟ್ಟಿರುವ ಸುಮನಸಾ ಸಂಸ್ಥೆಯು ನಗರಸಭೆ ವ್ಯಾಪ್ತಿಯಲ್ಲಿಯೇ ಇರುವುದು ನಮಗೆ ಹೆಮ್ಮೆ. ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಕಳೆದ 11 ವರ್ಷಗಳಿಂದ ಬೇರೆ ಬೇರೆ ಕಲಾ ತಂಡಗಳನ್ನು ಇಲ್ಲಿಗೆ ಕರೆಸುವ ಮೂಲಕ ಆ ತಂಡಗಳನ್ನು ಪ್ರೋತ್ಸಾಹಿಸುತ್ತದೆ. ಜತೆಗೆ ಇಲ್ಲಿನವರಿಗೆ ಹೊಸ ರಂಗಪ್ರಯೋಗಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ’ ಎಂದರು.

    ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌, ಉದ್ಯಮಿ ಹರೀಶ್ಚಂದ್ರ ಕೊಡವೂರು, ಸುಮನಸಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕಲ್ಮಾಡಿ ಉಪಸ್ಥಿತರಿದ್ದರು. ಯೋಗೀಶ್‌ ಕೊಳಲಗಿರಿ ಸ್ವಾಗಸಿದರು. ಜೀವನ್‌ ಕುಮಾರ್‌ ವಂದಿಸಿದರು. ಪ್ರವೀಣ್‌ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ರಂಗ ಪ್ರತಿಷ್ಠಾನದಿಂದ ‘ದಾಟ್ಸ್‌ ಆಲ್‌ ಯುವರ್‌ ಆನರ್‌’ ನಾಟಕ ಪ್ರದರ್ಶನಗೊಂಡಿತು.

    ಫೆಬ್ರವರಿ 28, ಮಂಗಳವಾರ – ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
    ತಂಡ: ರಂಗ ಸಂಗಾತಿ, ಮಂಗಳೂರು
    ರಚನೆ-ನಿರ್ದೇಶನ: ಶಶಿರಾಜ್ ರಾವ್ ಕಾವೂರು

    Share. Facebook Twitter Pinterest LinkedIn Tumblr WhatsApp Email
    Previous Article“ಕನಸುಗಣ್ಣಿನ ಕಪ್ಪಣ್ಣ” ಗ್ರಂಥದ ಬಿಡುಗಡೆ ಸಮಾರಂಭ – ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ
    Next Article ಮಣಿಪಾಲದಲ್ಲಿ ಕಾಸರಗೋಡು ಚಿನ್ನಾ ನಿರ್ದೇಶನದ “ಕರ್ಮಾಧೀನ” ಮತ್ತು “ಎಕ್ಲೊ ಆನೇಕ್ಲೊ” ಕೊಂಕಣಿ ನಾಟಕ
    roovari

    Add Comment Cancel Reply


    Related Posts

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ‘ಆ ಊರು – ಈ ಊರು’ ನಾಟಕ ಪ್ರದರ್ಶನ | ಫೆಬ್ರವರಿ 15

    February 12, 2026

    ಕಲಾಮಂದಿರದಲ್ಲಿ ‘ಆಯಾಮೋತ್ಸವ’ದ ಸಮಾರೋಪ ಸಮಾರಂಭ

    February 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.