ಉಡುಪಿ : ನೃತ್ಯ ವಸಂತ ನಾಟ್ಯಾಲಯ (ರಿ.) ಕುಂದಾಪುರ ಇದರ ವತಿಯಿಂದ ಪ್ರಸ್ತುತ ಪಡಿಸುವ ‘ಸುಮಂಜುಳ’ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 10 ಮೇ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದುಷಿ ಪ್ರವೀತಾ ಅಶೋಕ್ ಇವರ ಶಿಷ್ಯೆಯರಾದ ಯುಕ್ತಿ ಉಡುಪ, ಪೂರ್ವಿಕಾ, ಸುನಿಧಿ ಉಡುಪ, ಗಾರ್ಗಿದೇವಿ ಮತ್ತು ಮಹಾಲಕ್ಷ್ಮೀ ಸಿ.ಜಿ. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿದುಷಿ ಪ್ರವೀತಾ ಅಶೋಕ್ ಇವರ ನಟುವಾಂಗ ಮತ್ತು ನಿರ್ದೇಶನದಲ್ಲಿ ಪ್ರಸ್ತುತಗೊಳ್ಳುವ ಈ ಕಾರ್ಯಕ್ರಮದಲ್ಲಿ ಚೆನ್ನೈಯ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಇವರು ಹಾಡುಗಾರಿಕೆ, ಬೆಂಗಳೂರಿನ ವಿದ್ವಾನ್ ವಿನಯ್ ನಾಗರಾಜನ್ ಮೃದಂಗದಲ್ಲಿ, ಚೆನ್ನೈಯ ವಿದ್ವಾನ್ ಅನಂತ ನಾರಾಯಣನ್ ವೀಣೆಯಲ್ಲಿ ಮತ್ತು ಬೆಂಗಳೂರಿನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಕೊಳಲಿನಲ್ಲಿ ಸಹಕರಿಸಲಿದ್ದಾರೆ.