ಕೋಟ : ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ತರಬೇತಿ ಕೇಂದ್ರಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪ್ರಾಯೋಜಿತ ಇಂಟರ್ನೇಷನಲ್ ಎಫೇರ್ಸ್ ವಿಭಾಗದ ಮಣಿಪಾಲ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ 2025ರ ಆಸ್ಟ್ರೇಲಿಯ, ದುಬೈ, ದೆಹಲಿ, ಉತ್ತರ್ ಪ್ರದೇಶ್, ಬಿಹಾರ್, ಕೇರಳ ಮತ್ತು ಕರ್ನಾಟಕ ಮೂಲದ ಸುಮಾರು 25 ಮಂದಿ ಶಿಬಿರಾರ್ಥಿಗಳು ದಿನಾಂಕ 10 ಜುಲೈ 2025ರಂದು ಭೇಟಿಕೊಟ್ಟರು.
ಹತ್ತು ದಿವಸಗಳ ಶಿಬಿರದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ಪರಿಚಯ ಕಾರ್ಯಕ್ರಮದ ಅಂಗವಾಗಿ ನಾಡಿನ ಅನೇಕ ಕಡೆ ಸಂದರ್ಶಿಸಿದ ಅವರು ಮಕ್ಕಳ ಮೇಳದ ಯಕ್ಷಗಾನ ತರಬೇತಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುವುದರೊಂದಿಗೆ ನಿರ್ದೇಶಕರೊಡನೆ ಮತ್ತು ಬಾಲ ಕಲಾವಿದರೊಂದಿಗೆ ಸಂವಾದ ನಡೆಸಿದರು.
ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಾದ ಎಚ್. ಶ್ರೀಧರ ಹಂದೆ ಸ್ವತಃ ‘ಚಿತ್ರಾಂಗದೆ’ ಪಾತ್ರವನ್ನು ಅಭಿನಯಿಸಿ, ವಿದ್ಯಾರ್ಥಿಗಳಿಗೆ ಯಕ್ಷಗಾನ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ “ಮುಂದಿನ ತಲೆಮಾರಿಗೆ ಸಾಂಪ್ರದಾಯಿಕ ಯಕ್ಷಗಾನವನ್ನು ದಾಟಿಸುವುದು ಮಕ್ಕಳ ಮೇಳದ ಸ್ಥಾಪನೆಯ ಹಿಂದಿನ ಉದ್ದೇಶ” ಎಂದರು.
ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ನಿರ್ದೇಶನದಲ್ಲಿ ಮಕ್ಕಳ ಮೇಳದ ಹಿರಿಯ ಕಿರಿಯ ಕಲಾವಿದರು ಹೆಜ್ಜೆಗಾರಿಕೆ, ನಾಟ್ಯಾಭಿನಯ, ಆಹಾರ್ಯಗಳ ಪ್ರಾತ್ಯಕ್ಷಕೆ ನಡೆಸಿದರು. ಶಿಬಿರಾರ್ಥಿಗಳು ಸ್ವತಃ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಶಿಬಿರದ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಮಾಹೆಯ ಎಂ. ಐ. ಟಿ. ಯ ಮಾನವಿಕ ಮತ್ತು ನಿರ್ವಹಣಾ ವಿಭಾಗದ ನಿರ್ದೇಶಕ ಪ್ರವೀಣ ಕೆ. ಶೆಟ್ಟಿ, ಮಾಹೆಯ ಭಾಷಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಥ್ವೀರಾಜ ಕವತ್ತಾರ್, ಮಾಹೆಯ ಔಷಧ ವಿಭಗದ ಪ್ರಾಧ್ಯಾಪಕ ಶ್ರೀನಿವಾಸ ಹೆಬ್ಬಾರ್, ಮಕ್ಕಳ ಮೇಳದ ಉಪಾಧ್ಯಕ್ಷ ಜನಾರ್ದನ ಹಂದೆ, ಶಿಕ್ಷಕಿ ವಿನಿತ ಉಪಸ್ಥಿತರಿದ್ದರು. ಯಕ್ಷಗಾನದಲ್ಲಿ ಶೈಕ್ಷಣಿಕ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಸುತ್ತಿರುವ ಅಭಿಲಾಷ ಎಸ್. ಮಕ್ಕಳ ಮೇಳ ಸಾಗಿ ಬಂದ ಪಥದ ಕುರಿತಂತೆ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಎಚ್. ಶ್ರೀಧರ ಹಂದೆಯವರನ್ನು ಇದೆ ಸಂದರ್ಭ ಮಾಹೆಯ ವತಿಯಿಂದ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Previous Articleಡಾ.ವಿವೇಕ್ ರೈಗೆ ಚಿದಾನಂದ ಪ್ರಶಸ್ತಿ