ಪುತ್ತೂರು : ಸುನಾದ ಸಂಗೀತ ಕಲಾ ಶಾಲೆಯ ಪುತ್ತೂರು ಶಾಖೆಯ ವತಿಯಿಂದ ‘ಸುನಾದ ಸಂಗೀತೋತ್ಸವ’ವನ್ನು ದಿನಾಂಕ 10 ಮತ್ತು 11 ಜನವರಿ 2026ರಂದು ಪುತ್ತೂರಿನ ನೆಹರು ನಗರದ ಸುನಾದ ವಸತಿಯುತ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 10 ಜನವರಿ 2026ರಂದು ಮಧ್ಯಾಹ್ನ 2-00 ಗಂಟೆಗೆ ಸುನಾದ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಸಂಜೆ 6-30 ಗಂಟೆಗೆ ನಡೆಯಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣು ವಾದನದಲ್ಲಿ ಮೈಸೂರಿನ ವಿದ್ವಾನ್ ವಿ. ವಂಶೀಧರ್ ವೇಣುವಾದನ, ವಿದ್ವಾನ್ ವೇಣುಗೋಪಾಲ ಶಾನುಬೋಗ್ ವಯಲಿನ್, ಡಾ. ಅಕ್ಷಯ ನಾರಾಯಣ ಮೃದಂಗದಲ್ಲಿ ಮತ್ತು ವಿದ್ವಾನ್ ಬಾಲಕೃಷ್ಣ ಭಟ್ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 11 ಜನವರಿ 2026ರಂದು ಬೆಳಿಗ್ಗೆ 9-00 ಗಂಟೆಗೆ ಸುನಾದ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಮಧ್ಯಾಹ್ನ 12-00 ಗಂಟೆಗೆ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಂಚರತ್ನ ಗೋಷ್ಠಿ ಗಾಯನ, ಸಂಜೆ 6-30 ಗಂಟೆಗೆ ನಡೆಯಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ವಿದ್ವಾನ್ ಟಿ.ವಿ. ರಾಮ್ ಪ್ರಸಾದ್ ಇವರ ಹಾಡುಗಾರಿಕೆಗೆ ಚೆನೈಯ ವಿದ್ವಾನ್ ಮೈಸೂರು ವಿ. ಶ್ರೀಕಾಂತ್ ವಯಲಿನ್, ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಮೃದಂಗದಲ್ಲಿ ಮತ್ತು ಮೈಸೂರಿನ ವಿದ್ವಾನ್ ಶರತ್ ಕೌಶಿಕ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.

