ಧಾರವಾಡ : 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಶ್ರೀ ಎಂ. ಆರ್. ದತ್ತಾತ್ರಿ ಇವರ ‘ಸರ್ಪಭ್ರಮೆ’ ಕಾದಂಬರಿ ಆಯ್ಕೆಯಾಗಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಈ ಸ್ಪರ್ಧೆಗೆ ಯುವ ವಿಮರ್ಶಕ ಡಾ. ಸುಭಾಷ್ ಪಟ್ಟಾಜೆ ಮತ್ತು ಪ್ರಬುದ್ಧ ಓದುಗ ಡಾ. ಪ್ರಶಾಂತ್ ಮಾಡಳ್ಳಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವರ್ಷ 30ಕ್ಕೂ ಅಧಿಕ ಕಾದಂಬರಿಗಳು ಬಂದಿದ್ದು, ಕಳೆದ ವರ್ಷದಂತೆ ಈ ವರ್ಷವೂ ಪ್ರಶಸ್ತಿ ವಿಜೇತ ಕಾದಂಬರಿಯಾದ ‘ಸರ್ಪಭ್ರಮೆ’ಯನ್ನು ಓದುಗರೇ ಕಳಿಸಿದ್ದು ವಿಶೇಷ. ಪ್ರಶಸ್ತಿ ಪ್ರದಾನ ಸಮಾರಂಭವು 19 ಎಪ್ರಿಲ್ 2025ರ ಶನಿವಾರದಂದು ಧಾರವಾಡದಲ್ಲಿ ಜರುಗಲಿದೆ.