ಕಾಸರಗೋಡು : ಕಾಸರಗೋಡಿನ ಯುವ ರಂಗನಟಿ ಸುಶ್ಮಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ‘ನೀನಾಸಂ’ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕೆಂಬುದು ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸಾಗಿರುತ್ತದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ದೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2020ರಲ್ಲಿ ‘ಸಾಹೇಬ್ರು ‘ಸಾಹೇಬ್ರು ಬಂದವೇ’ ನಾಟಕವನ್ನು ರಾಜ್ಯದ ಖ್ಯಾತ ರಂಗಭೂಮಿ ನಿರ್ದೆಶಕರಾದ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 20 ಪ್ರದರ್ಶನಗಳನ್ನು ನೀಡಿದ ಈ ನಾಟಕ ರಂಗಭೂಮಿ ಪ್ರೇಕ್ಷಕರ ಮನ ಗೆದ್ದಿತ್ತು. ಇದರಲ್ಲಿ ಅಭಿನಯಿಸಿದ ಎಲ್ಲರೂ ರಂಗಭೂಮಿಗೆ ಹೊಸದಾಗಿ ಪರಿಚಯಗೊಂಡ ಕಲಾವಿದರೇ ಆಗಿದ್ದರು. ಇದರಲ್ಲಿ ಕಲ್ಮಕಾರಿನ ಪ್ರತಿಭೆ ಮಮತಾ ಕಳೆದ ಬಾರಿಯ ನೀನಾಸಂ ತರಬೇತಿಗೆ ಆಯ್ಕೆಯಾಗಿದ್ದು, ಇದೇ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರ ಮಾಡುತ್ತಿದ್ದ ಕೇರಳ ರಾಜ್ಯದ ಕಾಸರಗೋಡಿನ ಸುಶ್ಮಿತಾ ಮೋಹನ್ ಈ ಬಾರಿಯ ರಂಗ ತರಬೇತಿಗೆ ಆಯ್ಕೆಯಾಗುವುದರ ಮೂಲಕ ಅರೆಭಾಷೆ ರಂಗಭೂಮಿಗೆ ಮತ್ತೊಂದು ಗರಿ ತಂದಿದ್ದಾರೆ. ಸುಶ್ಮಿತಾ ಅವರು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ನಿವಾಸಿ ಬೆಳ್ಳಿಪಾಡಿ ಪೆರುಂದಲಪದವು ಮೋಹನ್ ಮತ್ತು ಸುಶೀಲಾ ಅವರ ದ್ವಿತೀಯ ಪುತ್ರಿ.
Subscribe to Updates
Get the latest creative news from FooBar about art, design and business.
Previous Articleಕಾಸರಗೋಡಿನಲ್ಲಿ ಯಕ್ಷಗಾನ ತರಗತಿ ಪ್ರಾರಂಭ | ಜುಲೈ 6