ಕುಂದಾಪುರ : ಜೆ.ಸಿ.ಐ. ಕುಂದಾಪುರ ಇದರ ಸುವರ್ಣ ಸಂಭ್ರಮ ಪ್ರಯುಕ್ತ ‘ಸುವರ್ಣ ಜೇಸೀಸ್ ನಾಟಕೋತ್ಸವ’ವನ್ನು ದಿನಾಂಕ 21 ಡಿಸೆಂಬರ್ 2025ರಿಂದ 23 ಡಿಸೆಂಬರ್ 2025ರವರೆಗೆ ಪ್ರತಿದಿನ ಸಂಜೆ 7-30 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 21 ಡಿಸೆಂಬರ್ 2025ರಂದು ನೀನಾಸಂ ತಿರುಗಾಟದ ನಾಟಕ ‘ಹೃದಯದ ತೀರ್ಪು’ ಡಾ. ಎಂ. ಗಣೇಶ್ ಇವರ ನಿರ್ದೇಶನದಲ್ಲಿ, ದಿನಾಂಕ 22 ಡಿಸೆಂಬರ್ 2025ರಂದು ನೀನಾಸಂ ತಿರುಗಾಟದ ನಾಟಕ ‘ಅವತರಣಮ್ ಭ್ರಾಂತಾಲಯಮ್’ ಶಂಕರ ವೆಂಕಟೇಶ್ವರನ್ ಇವರ ನಿರ್ದೇಶನದಲ್ಲಿ ಹಾಗೂ ದಿನಾಂಕ 23 ಡಿಸೆಂಬರ್ 2025ರಂದು ಲಾವಣ್ಯ ಬೈಂದೂರು ತಂಡದವರಿಂದ ರಾಜೇಂದ್ರ ಕಾರಂತ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ ನಡೆಯಲಿದೆ.

