ಕುಂದಾಪುರ : ಜೆ.ಸಿ.ಐ. ಕುಂದಾಪುರ ಇದರ ಸುವರ್ಣ ಸಂಭ್ರಮ ಪ್ರಯುಕ್ತ ‘ಸುವರ್ಣ ಜೇಸೀಸ್ ನಾಟಕೋತ್ಸವ’ವನ್ನು ದಿನಾಂಕ 22 ಡಿಸೆಂಬರ್ 2024ರಿಂದ 26 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 22 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಮತ್ತು ನಿರ್ದೇಶನದಲ್ಲಿ ರಂಗ ಸಂಗಾತಿ ತಂಡದವರು ‘ದಟ್ಸ್ ಆಲ್ ಯುವರ್ ಆನರ್’, ದಿನಾಂಕ 23 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಹಾಗೂ ಹಾರಾಡಿಯ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡದವರು ‘ಬರ್ಬರಿಕ’, ದಿನಾಂಕ 24 ಡಿಸೆಂಬರ್ 2024ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ. ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಮಾಲತೀ ಮಾಧವ’, ದಿನಾಂಕ 25 ಡಿಸೆಂಬರ್ 2024ರಂದು ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಅಂಕದ ಪರದೆ’, ದಿನಾಂಕ 26 ಡಿಸೆಂಬರ್ 2024ರಂದು ಮಂಜು ಕೊಡಗು ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಭಳಿರೇ ವಿಚಿತ್ರಂ ತಂಡದವರು ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ರಂಗ ಪ್ರಯೋಗ ‘ದಶಾನನ ಸ್ವಪ್ನ ಸಿದ್ಧಿ’ ಎಂಬ ನಾಟಕಗಳನ್ನು ಪ್ರಸ್ತುತ ಪಡಿಸಲಿದ್ದಾರೆ.