ಬೆಂಗಳೂರು : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -12ರ ಸರಣಿಯಲ್ಲಿ ಕೆ. ಎಂ. ಶೇಖರ್ ಸಾರಥ್ಯದ ರಂಗಸ್ಥಳ ಮತ್ತು ಯಕ್ಷ ಮಿತ್ರ ಕೂಟ (ರಿ.) ಬೆಂಗಳೂರು ಇದರ ರಜತ ಪರ್ವ -2025ರ ಅಂಗವಾಗಿ ಹಾರಾಡಿ – ಮಟಪಾಡಿ ತಿಟ್ಟುಗಳ ‘ಯಕ್ಷಗಾನ ಪ್ರಾತ್ಯಕ್ಷಿಕೆ’ಯನ್ನು ದಿನಾಂಕ 19 ಜುಲೈ 2025ರಂದು ಸಂಜೆ 3-00 ಗಂಟೆಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್. ಸುಜಯೀಂದ್ರ ಹಂದೆ ಮತ್ತು ಬಳಗದವರಿಂದ ಈ ಕಾರ್ಯಕ್ರಮ ನಡೆಯಲಿದೆ.