ದಾವಣಗೆರೆ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -13ರ ಸರಣಿಯಲ್ಲಿ ಸುವರ್ಣ ಪರ್ವ ಗೌರವ ಸಮ್ಮಾನ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 21 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ, ಯಕ್ಷರಂಗ ಯಕ್ಷಗಾನ ಸಂಸ್ಥೆ ಮತ್ತು ದಾವಣಗೆರೆ ಜಿಲ್ಲಾ ನೌಕರರ ಸಂಘದ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸುವರ್ಣ ಪರ್ವ ಗೌರವ ಪುರಸ್ಕಾರವನ್ನು ಯಕ್ಷಗುರು ಹಟ್ಟಿಯಂಗಡಿ ಆನಂದ ಶೆಟ್ಟಿ ಇವರಿಗೆ ಪ್ರದಾನ ಮಾಡಲಾಗುವುದು. ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯಾಧ್ಯಕ್ಷರಾದ ಕೆ. ಮಹೇಶ್ ಉಡುಪ ಇವರ ಅಧ್ಯಕ್ಷತೆಯಲ್ಲಿ ಡಾ. ಬಿ.ಆರ್. ರವಿಕಾಂತೇ ಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಜಲವಳ್ಳಿ ವಿದ್ಯಾಧರ ರಾವ್ ಸಾರಥ್ಯದ ಕಲಾಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ ಇವರಿಂದ ಕವಿ ಕಡಂದಲೆ ಬಿ. ರಾಮ್ ರಾವ್ ವಿರಚಿತ ‘ಶ್ರೀ ರಾಮಾಂಜನೇಯ ಯುದ್ಧ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.