ತೆಕ್ಕಟ್ಟೆ : ಐವತ್ತರ ವಸಂತದಲ್ಲಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ನೆರವಿನೊಂದಿಗೆ ಸುವರ್ಣ ಪರ್ವ -5ರ ಸರಣಿಯಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತು ವರ್ಷಗಳ ಹಿರಿಯ ಕಿರಿಯ ಕಲಾವಿದರ ‘ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ’ವನ್ನು ದಿನಾಂಕ 25 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಯಕ್ಷಗುರುಗಳಾದ ನರಸಿಂಹ ತುಂಗ ಇವರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ ಗಂಟೆ 10-30ಕ್ಕೆ ಸವಿ ನೆನಪು ಗುರು ಶಿಷ್ಯ ಸಂವಾದ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಿಂದ ‘ವೃಷಸೇನ-ಕೃಷ್ಣಾರ್ಜುನ-ಬಬ್ರುವಾಹನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.