ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಸುವರ್ಣ ಪರ್ವ -7ರ ಸರಣಿಯಲ್ಲಿ ಶ್ರೀನಿವಾಸ ಉಳ್ಳೂರ ಹಟ್ಟಿಕುದ್ರು ಪ್ರವರ್ತಕರು ಶೇಷಕೃಷ್ಣ ಕನ್ವೆನ್ಶನ್ ಹಾಲ್ ತಲ್ಲೂರು ಇವರ ಮುಖ್ಯ ಪ್ರಯೋಜಕತ್ವದಲ್ಲಿ ‘ಯಕ್ಷಲೋಕದೊಳಗೊಂದು ಪಯಣ’ ಬಡಗುತಿಟ್ಟು ಯಕ್ಷಗಾನದ ವೇಷ ಭೂಷಣಗಳ ಪರಿಚಯ ಕಾರ್ಯಕ್ರಮವನ್ನು ದಿನಾಂಕ 17 ಫೆಬ್ರವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಉದ್ಯಮಿ ಹೆಚ್. ಗಣೇಶ್ ಕಾಮತ್, ಪ್ರವರ್ತಕರಾದ ಶ್ರೀನಿವಾಸ ಉಳ್ಳೂರ, ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ಕಾಶೀನಾಥ ಪೈ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿಯಾದ ಎನ್. ಸದಾಶಿವ ನಾಯಕ್ ಇವರುಗಳು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು.