ಮಂಗಳೂರು : ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಘಟನೆಗಳ ಸಹಯೋಗದೊಂದಿಗೆ ‘ಸುವರ್ಣ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಸಿನೆಮಾಟೋಗ್ರಾಫರ್ ಶ್ರೀ ಜಿ. ಎಸ್. ಭಾಸ್ಕರ್, ಕಲಾ ಸಂಗಮ ಕುಡ್ಲ ಇದರ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಉದ್ಘಾಟನೆ ಮಾಡಲಿರುವರು. ‘ಸದಾನಂದ ಸುವರ್ಣರು ಮತ್ತು ಸಿನೆಮಾ’ ಎಂಬ ವಿಷಯದ ಬಗ್ಗೆ ಸಿನೆಮಾ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ‘ನಿರ್ದೇಶಕ ಸದಾನಂದ ಸುವರ್ಣರೊಂದಿಗಿನ ಸಮಯ’ ಎಂಬ ವಿಷಯದ ಬಗ್ಗೆ ರಂಗ ಭೂಮಿ ಕಲಾವಿದೆ ಶ್ರೀಮತಿ ಗೀತಾ ಸುರತ್ಕಲ್ ಮತ್ತು ಸಂಕಲನಕಾರರಾದ ಎಂ.ಎನ್. ಸ್ವಾಮಿ, ‘ನಾನು ಕಂಡಂತೆ ಶ್ರೀ ಸದಾನಂದ ಸುವರ್ಣರು’ ಎಂಬ ವಿಷಯದ ಬಗ್ಗೆ ಸಿನೆಮಾಟೋಗ್ರಾಫರ್ ಶ್ರೀ ಜಿ. ಎಸ್. ಭಾಸ್ಕರ್ ಉಪನ್ಯಾಸ ನೀಡಲಿದ್ದಾರೆ.
ಮಂಗಳೂರಿನ ರಂಗಭೂಮಿ ಕಲಾವಿದರಾದ ಶ್ರೀ ಚಂದ್ರಹಾಸ್ ಉಳ್ಳಾಲ್, ಶ್ರೀ ಗೋಪಿನಾಥ್ ಭಟ್, ಶ್ರೀ ಲಕ್ಷ್ಮಣ ಕುಮಾರ್ ಮಲ್ಲೂರ್, ಡಾ. ಮಂಜುಳ ಶೆಟ್ಟಿ ಮತ್ತು ಶ್ರೀ ಜಗನ್ ಪವಾರ್ ಬೇಕಲ್ ಇವರುಗಳು ಸುವರ್ಣರೊಂದಿಗಿನ ಅನುಭವ ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸದಾನಂದ ಸುವರ್ಣ ದತ್ತಿ ಉಪನ್ಯಾಸ ನಡೆಯಲಿದೆ. ಮುಂಬೈಯ ಸುವರ್ಣ ರಂಗಭೂಮಿಯ ಅನುಭವಗಳ ಬಗ್ಗೆ ಬರಹಗಾರ ಕಲಾವಿದ ರಂಗಕರ್ಮಿ ಶ್ರೀ ಗಿರಿಧರ್ ಕಾರ್ಕಳ, ಕವಿ ಸಾಹಿತಿ ಶ್ರೀ ಗೋಪಾಲ್ ತ್ರಾಸಿ ಮತ್ತು ಕಲಾವಿದ ರಂಗ ನಿರ್ದೇಶಕ ಶ್ರೀ ಎಸ್.ಕೆ. ಸುಂದರ್ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಇ.ವಿ. ಎಸ್. ಮಾಬೆನ್, ಡಾ. ಧೀರಜ್, ಡಾ. ಜೆಸ್ಲಿ ಹಂಝ, ಶ್ರೀ ಒಲಿವರ್ ಮೆಂಡೋನ್ಸ ಮತ್ತು ಕುಮಾರಿ ಲಲಿತ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಸದಾನಂದ ಸುವರ್ಣ ಇವರ ನಿರ್ದೇಶನದಲ್ಲಿ ‘ಕೋರ್ಟ್ ಮಾರ್ಷಲ್’ ನಾಟಕ ಪ್ರದರ್ಶನಗೊಳ್ಳಲಿದೆ.