ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವತಿಯಿಂದ ದಿ. ಲಿಯಾಂಡರ್ ವರ್ನನ್ ನೊರೊನ್ಹಾ ಸಂಸ್ಮರಣೆಯ ಸಹ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ‘ಸ್ವರ ಕುಡ್ಲ ಸೀಸನ್ -5’ ಸಂಗೀತ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ ನಿಟ್ಟೆಗುತ್ತು ಇವರು ಮಾತನಾಡುತ್ತಾ “ಸಂಗೀತ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಉತ್ತಮ ಸಂಗೀತಗಳು ಮನಸ್ಸಿಗೆ ಮುದ ನೀಡುತ್ತವೆ. ಸಂಗೀತ ಕೇಳುವುದು ಉತ್ತಮ ಅಭ್ಯಾಸ” ಎಂದು ಅಭಿಪ್ರಾಯಪಟ್ಟರು.
ಖ್ಯಾತ ಗಾಯಕ ಟಾಗುರ್ ದಾಸ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಅಧ್ಯಕ್ಷತೆ ವಹಿಸಿದ್ದರು. ಸಿಂಫನಿ ಮ್ಯೂಸಿಕಲ್ ಇನ್ ಸ್ಟ್ರುಮೆಂಟ್ ಮಳಿಗೆಯ ಮಾಲಕರು ಲೊಯ್ ನೊರೊನ್ಹಾ ದಂಪತಿ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೋಹನ್ ರಾವ್, ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಒಕ್ಕೂಟದ ಪೂರ್ವಾಧ್ಯಕ್ಷ ತೋನ್ಸೆ ಪುಷ್ಕಳ ಕುಮಾರ್, ಪ್ರಮುಖರಾದ ಮುರಳಿಧರ ಕಾಮತ್, ಮಹಮ್ಮದ್ ಇಕ್ಬಾಲ್, ರಮೇಶ್ ಸಾಲ್ಯಾನ್, ಆರ್.ಜೆ. ಮೋಹಿತ್, ಐವನ್ ಡಿಸೋಜ, ಖಜಾಂಚಿ ಧನ್‌ರಾಜ್, ಜಗದೀಶ್ ಶೆಟ್ಟಿ, ನವಗಿರಿ ಗಣೇಶ್, ಮಲ್ಲಿಕಾ ಶೆಟ್ಟಿ, ಕೇಶವ ಕನಿಲ, ಹುಸೇನ್ ಕಾಟಿಪಳ್ಳ, ರಂಜನ್ ದಾಸ್, ದಿನಕರ್ ಎನ್.ಎಂ., ಸಂತೋಷ್ ಅಂಚನ್, ಉಡುಪಿ ಘಟಕದ ಸುಭಾಷಿತ್, ರಾಧಾಕೃಷ್ಣ ಭಟ್, ಮುಕ್ತ ರಾವ್ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ಕಲಾವಿದರಾದ ಗಣೇಶ್ ಪ್ರಸಾದ್ ಹಾಗೂ ಜಲೀಲ್ ಪಾಶಾ ಬೆಂಗಳೂರು ತೀರ್ಪುಗಾರರಾಗಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ರಾಜ್ ಉಳ್ಳಾಲ್ ಸ್ವಾಗತಿಸಿದರು. ಕೃಷ್ಣಪ್ರಸಾದ್ ವಂದಿಸಿದರು.