Subscribe to Updates

    Get the latest creative news from FooBar about art, design and business.

    What's Hot

    ಉದ್ಘಾಟನೆಗೊಂಡ ತುಳು ನಾಟಕ ಕಾರ್ಯಾಗಾರ

    June 25, 2025

    ಕಾಳಿದಾಸಕಾವ್ಯ – ಕಥಾಸಪ್ತಾಹಃ | ಜೂನ್ 26

    June 25, 2025

    ಡಾ. ಗಣನಾಥ ಎಕ್ಕಾರು ಇವರಿಗೆ ‘ಜೀಶಂಪ ರಾಜ್ಯ ಪ್ರಶಸ್ತಿ’

    June 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತಾಭಿಮಾನಿಗಳನ್ನು ರಂಜಿಸಿದ ‘ಯುವ ಸಂಗೀತೋತ್ಸವ ಕಾರ್ಯಕ್ರಮ
    Music

    ಸಂಗೀತಾಭಿಮಾನಿಗಳನ್ನು ರಂಜಿಸಿದ ‘ಯುವ ಸಂಗೀತೋತ್ಸವ ಕಾರ್ಯಕ್ರಮ

    February 11, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸ್ವರ ಸಾನ್ನಿಧ್ಯ ರಾಷ್ಟ್ರೀಯ ಮಟ್ಟದ ‘ಯುವ ಸಂಗೀತೋತ್ಸವ ಕಾರ್ಯಕ್ರಮ”ವು ದಿನಾಂಕ 08 ಫೆಬ್ರವರಿ 2025ರಂದು ಮಂಗಳೂರಿನ ಟಿ. ಎಂ. ಎ. ಪೈ. ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ ಇಲ್ಲಿ ನಡೆಯಿತು.

     ಸಮಾರಂಭದಲ್ಲಿ ಕಲಾವಿದರನ್ನು ಸಮ್ಮಾನಿಸಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ “ಯುವ ಪೀಳಿಗೆಯಲ್ಲಿ ಸಂಗೀತದ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ‘ಸ್ವರ ಸಾನ್ನಿಧ್ಯ ರಾಷ್ಟ್ರೀಯ ಸಂಗೀತೋತ್ಸವ’ ಗಮನಾರ್ಹ ಕೆಲಸ ಮಾಡಿದೆ ಹಾಗೂ ಸಂಗೀತಕ್ಕೆ ಅದ್ಭುತವಾದ ಶಕ್ತಿಯಿದೆ.” ಎಂದರು.

    ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ದ. ಕ. ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಉದ್ಯಮಿ ಪುಷ್ಪರಾಜ್ ಜೈನ್, ಐಡಿಯಲ್ ಆಡಳಿತ ನಿರ್ದೇಶಕ ಮುಕುಂದ ಕಾಮತ್, ಸ್ವಸ್ತಿಕ್ ನ್ಯಾಶನಲ್ ಬ್ಯುಸಿನೆಸ್ ಸ್ಕೂಲ್‌ ಇದರ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳ, ಮೈಸೂರು ಎಲೆಕ್ಟಿಕಲ್ ಕಂಪೆನಿಯ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ, ಜ್ಯೋತಿಷಿ ಅಶ್ವಿನ್ ಶರ್ಮಾ, ಓಶಿಯನ್ ಪರ್ಲ್ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್, ನಗರ ಉಪ ಪೊಲೀಸ್ ಆಯುಕ್ತ ರವಿಶಂಕರ್, ‘ಕಲಾಸಾಧನ’ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ ನಾಯಕ್, ಅಶ್ವಿನ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ  ಶ್ರೀನಿವಾಸ ನಾಯಕ್ ಸ್ವಾಗತಿಸಿ, ಪುಷ್ಪರಾಜ್ ಬಿ. ಎನ್. ನಿರೂಪಿಸಿ, ಭಾಸ್ಕರ್ ರೈ ಕಟ್ಟ ವಂದಿಸಿದರು. ಕೋಲ್ಕತಾದ ಅರಣ್ಯ ಚೌಧರಿಯವರಿಂದ ಸಂತೂರ್ ವಾದನ, ಕೋಲ್ಕತಾದ ಪಿಂಟೂದಾಸ್‌ರವರ ತಬಲಾ ಸಾಥ್‌ನೊಂದಿಗೆ ಹಿಂದೂಸ್ತಾನಿ ಕಚೇರಿ ನಡೆಯಿತು.

    ಧಾರಾವಾಡ ಜಿಲ್ಲೆಯ ಮಾನ್ವಿ ತಾಲೂಕಿನ ಬಸವರಾ ವಂದಲಿ ಹಾಗೂ ಸಂಗಡಿಗರು ಹಿಂದೂಸ್ತಾನಿ ಸಂಗೀತ ಕಛೇರಿ ನಡೆಸಿಕೊಟ್ಟರು. ಇವರಿಗೆ ಹೇಮಂತ್ ಭಾಗ್‌ವತ್ ಹಾರ್ಮೋನಿಯಂ ಹಾಗೂ ವಿಘ್ನೇಶ್ ಪ್ರಭು ತಬಲಾದಲ್ಲಿ ಸಾಥ್ ನೀಡಿದರು. ಮೇದಾ ಜಿ. ಭಟ್, ಅನ್ವೇಷಾ ನಾಯಕ್, ಶ್ರುತಿ ಪ್ರಭು ತಾನ್ಪೂರ ವಾದನದಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸುಕನ್ಯಾ ಕಾಮತ್ ನಿರೂಪಿಸಿದರು.

     

    Classical Music Music
    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಮತ್ತು ಕಿರಿಯರ ಗೋಷ್ಠಿಯೊಂದಿಗೆ ಸಂಪನ್ನಗೊಂಡ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
    Next Article ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಗವಾಯಿ ಸಂಗೀತೋತ್ಸವ | 16 ಫೆಬ್ರವರಿ
    roovari

    Add Comment Cancel Reply


    Related Posts

    ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ದಶಾನನ ಸ್ವಪ್ನಸಿದ್ಧಿ’ | ಜೂನ್ 30

    June 25, 2025

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025

    ಮನಶುದ್ದಿ ಮತ್ತು ಆತ್ಮ ಶುದ್ಧಿಗಾಗಿ ಸಂಗೀತ – ಖ್ಯಾತ ಛಾಯಾಚಿತ್ರ ಗ್ರಾಹಕ ಗಣೇಶ್ ಶೆಣೈ ಕುಂಬಳೆ

    June 24, 2025

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.