ಮಂಗಳೂರು : ಕಲಾಸಾಧನ ಕೇಂದ್ರದ ವತಿಯಿಂದ ‘ಸ್ವರಧಾರಾ’ ಸಂಗೀತ ಉತ್ಸವವನ್ನು ದಿನಾಂಕ 10 ಆಗಸ್ಟ್ 2025ರಂದು ಸಂಜೆ 5-00 ಗಂಟೆಯಿಂದ ಮಂಗಳೂರಿನ ಕೊಡಿಯಾಲ್ ಬೈಲ್, ನವ ಭಾರತ್ ಸರ್ಕಲ್ ಫೆಸಿಫಿಕ್ 4, ಹೊಟೇಲ್ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದೂಸ್ತಾನಿ ಗಾಯಕ ಕುಮಾರ್ ಮರಡೂರ ಸಂಗೀತ ಕಛೇರಿ ನಡೆಸಿಕೊಡುವರು. ಕಿರಾಣಾ, ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಗಳನ್ನು ಬೆರೆಸಿ ತಮ್ಮದೇ ಆದ ಗಾಯನ ಪ್ರಸ್ತುತ ಪಡಿಸುವ ಇವರು, ಹಿಂದೂಸ್ತಾನಿ ಗಾಯಕ ಸೋಮನಾಥ ಮರ್ದೂರರ ಪುತ್ರ. ಅಕ್ಷಯ ಜೋಶಿ ಧಾರವಾಡ ತಬಲಾ ಮತ್ತು ಸತೀಶ್ ಭಟ್ ಹೆಗ್ಗಾರ್ ಹಾರ್ಮೊನಿಯಂ ಸಾಥ್ ನೀಡುವರು.