ಸಾಲಿಗ್ರಾಮ : ಮಧುರತರಂಗ (ರಿ.) ಮಂಗಳೂರು ದಕ್ಷಿಣ ಕನ್ನಡ ಇವರ ವತಿಯಿಂದ ಸಾಲಿಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಕಾರದೊಂದಿಗೆ ಡಾ. ರಾಜ್ ಸವಿನೆನಪಿನ ‘ಸ್ವರಕಂಠೀರವ’ ನೃತ್ಯ ವೈವಿಧ್ಯತೆಯೊಂದಗೆ ಮನರಂಜನಾ ಕಾರ್ಯಕ್ರಮವನ್ನು ದಿನಾಂಕ 15 ಆಗಸ್ಟ್ 2025ರಂದು ಸಂಜೆ 3-00 ಗಂಟೆಗೆ ಸಾಲಿಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಕನ್ಯ ಜೆ. ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಇವರು ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಹಿರಿಯ ಕಲಾ ಸಾಹಿತಿ ಹೆಚ್. ಜನಾರ್ದನ ಹಂದೆ ಕೋಟ ಇವರಿಂದ ಚಂಪು ಕಾವ್ಯ ಪ್ರಸ್ತುತಿ ನಡೆಯಲಿದೆ. ಸುಪ್ರಭಾತ ನರಸಿಂಹ ಐತಾಳ್, ಸದಾನಂದ ಅಡಿಗ ಮತ್ತು ಪಿ.ವೈ. ಕೃಷ್ಣಪ್ರಸಾದ್ ಹೇರ್ಳೆ ಇವರನ್ನು ಸನ್ಮಾನಿಸಲಾಗುವುದು. ಸ್ವರಕಂಠೀರವ, ಸ್ವರತಪಸ್ವಿ ಜಗದೀಶ ಶಿವಪುರ ಇವರಿಂದ ಮನರಂಜನಾ ಗೀತೆಗಳು ಪ್ರಸ್ತುತಗೊಳ್ಳಲಿವೆ.