ಧಾರವಾಡ : ಭಾರತೀಯ ಸಂಗೀತಲೋಕದ ನವೋನ್ವೇಷ, ಸ್ವರಯೋಗಿನಿ ಖ್ಯಾತಿಯ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಸಂಸ್ಮರಣೆಯಲ್ಲಿ ‘ಸ್ವರಯೋಗಿನಿ’ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 15 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಅತ್ರೆ ಇವರಿಂದ ರಚಿತ ಬಂದಿಶ್ ಗಳನ್ನು ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಕಲಾವಿದೆ, ಹಿರಿಯ ಗಾಯಕಿ ವಿದುಷಿ ಪದ್ಮಾ ತಳವಲಕರ್ ಇವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ತೇಜಸ್ ಮಾಜಗಾಂವಕರ್ ಹಾಗೂ ಅಮೇಯ ಬಿಚ್ಚು ಹಾರ್ಮೋನಿಯಂನಲ್ಲಿ ಸಾಥ್ ಸಂಗತ್ ಮಾಡಿದರು. ಇನ್ನೊಬ್ಬ ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಹಿರಿಯ ನೃತ್ಯ ಕಲಾವಿದೆ ಡಾ. ಸುಚೇತಾ ಭಿಡೆ-ಚಾಪೇಕರ್ ಮತ್ತು ತಂಡದವರು ‘ನೃತ್ಯ-ಪ್ರಭ’ ಎಂಬ ವಿಶೇಷ ಭರತನಾಟ್ಯವನ್ನು ಪ್ರಸ್ತುತಪಡಿಸಿದರು. ಇವರೊಂದಿಗೆ ಶಿಷ್ಯೆಯರಾದ ಆರುಂಧತಿ ಪಟವರ್ಧನ, ರುಚಾ, ಅನುಜಾ ಹಾಗೂ ಸಾಗರಿಕಾ ನೃತ್ಯ ಪ್ರದರ್ಶಿಸಿದರು.