ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ವತಿಯಿಂದ ಪ್ರತಿವರ್ಷ ಕೊಡ ಮಾಡುವ ‘ಸ್ವರ್ಣ ಸಾಧನಾ’ ಪ್ರಶಸ್ತಿಗೆ ಈ ಬಾರಿ ಯಕ್ಷ ಗಾನ ಅರ್ಥಧಾರಿ, ಸಂಶೋಧಕ, ಸಂಸ್ಕೃತಿ ಚಿಂತಕ, ಡಾ. ಎಂ. ಪ್ರಭಾಕರ ಜೋಶಿ ಇವರನ್ನು ಆಯ್ಕೆ ಮಾಡಲಾಗಿದೆ. ನಿವೃತ್ತ ನೌಕರರ ಸಂಘದ ಸ್ವರ್ಣ ಮಹೋತ್ಸವ ನೆನಪಿಗಾಗಿ ನಾನಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಕಳೆದ 3 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು 1 ಮೇ 2025ರಂದು ಪುತ್ತೂರು ಜೈನಭವನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನಿಸಲಾಗುವುದು.