ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಆರ್ಟ್ ಮ್ಯಾಟರ್ಸ್ ಸಂಯೋಜಿಸುವ ‘ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ’ ಕರಿತು ವಿಚಾರ ಸಂಕಿರಣವನ್ನು ದಿನಾಂಕ 01 ಡಿಸೆಂಬರ್ 2024ರಂದು ಅಪರಾಹ್ನ 2-30 ಗಂಟೆಗೆ ಬೆಂಗಳೂರಿನ ಜಯನಗರ ಯುವ ಪಥ, ವಿವೇಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ಬೆಂಗಳೂರಿನ ಸಂಶೋಧಕರಾದ ಡಾ. ವಿಶ್ವನಾಥ ಎ. ಎಸ್., ಉಡುಪಿಯ ಲೇಖಕರಾದ ಡಾ. ಪೃಥ್ವೀರಾಜ ಕವತ್ತಾರು ಮತ್ತು ಉಡುಪಿಯ ಕಲಾವಿದರಾದ ಡಾ. ಜನಾರ್ದನ ರಾವ್ ಹಾವಂಜೆ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.