ಬೆಂಗಳೂರು : ವಿಮಾನ ಕಾರ್ಖಾನೆ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ತನ್ನ 38ನೇ ವಾರ್ಷಿಕ ಮಹಾ ಸಭೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 20255ರ ಗುರುವಾರರಂದು ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್, ಗಣಪತಿ ದೇವಸ್ಥಾನದ ಬಳಿ ಇವರು ರಾಮ ಮಂದಿರದಲ್ಲಿ ಭಕ್ತಿಭಾವದಿಂದ ಆಯೋಜಿಸಿತ್ತು.
ಸಾಧಕರ ಸನ್ಮಾನದ ಭಾಗವಾಗಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಹಾಗೂ ಸಂಘಟನೆಯ ವಿಚಾರದಲ್ಲಿ ಅಪರಿಮಿತ ಸಾಧನೆ ಮಾಡಿರುವ ಪಂಡಿತ್ ಡಾ. ಸತೀಶ್ ಹಂಪಿಹೊಳಿರವರನ್ನು ‘ವಿಪ್ರನಾದ ಸಾಧಕ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಎಸ್. ರಮೇಶ್, ಮಹಾಪೋಷಕರಾದ ಶ್ರೀಯುತ ಮನೋಹರ್, ಅಧ್ಯಕ್ಷರಾದ ಶ್ರೀಯುತ ಜೆ. ರವಿಶಂಕರ್, ಕಾರ್ಯದರ್ಶಿಯಾದ ಶ್ರೀಯುತ ಬಿ. ಎಸ್. ಯೋಗಾನರಸಿಂಹ ಮತ್ತು ಖಜಾಂಚಿ ಶ್ರೀಯುತ ಎಚ್.ಸಿ. ಸುಂದರೇಶ್ ಇವರುಗಳು ಉಪಸ್ಥಿತರಿದ್ದರು.
