ಎಡನೀರು ಮಠ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಶ್ರೀ ಸಂಪುಟ ನರಸಿಂಹ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮಠ, ಶ್ರೀ ಶ್ರೀ ವಿದ್ಯಾಪ್ರಸನ್ನ ಶ್ರೀ ಪಾದಂಗಳವರ 29ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವದ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮ ‘ವೀರಮಣಿ ಕಾಳಗ’ ಎಂಬ ಆಖ್ಯಾನದೊಂದಿಗೆ ದಿನಾಂಕ 01 ಆಗಸ್ಟ್ 2025ರಂದು ಶ್ರೀ ಸುಬ್ರಹ್ಮಣ್ಯ ಮಠದ ಅನಿರುದ್ಧ ತೀರ್ಥ ವೇದಿಕೆಯಲ್ಲಿ ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಈಶ್ವರ), ಶುಭಾ ಅಡಿಗ (ಹನೂಮಂತ), ಶುಭಾ ಗಣೇಶ್ (ಶತ್ರುಘ್ನ), ಹರಿಣಾಕ್ಷಿ ಜೆ. ಶೆಟ್ಟಿ (ವೀರಮಣಿ) ಸಹಕರಿಸಿದರು. ಭವ್ಯ ಶ್ರೀ ಕುಲ್ಕುಂದ ಸಂಯೋಜಿಸಿ, ಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಯಜ್ಞೇಶ್ ಆಚಾರ್ಯ ಸಹಕರಿಸಿದರು. ಶ್ರೀ ಶ್ರೀ ವಿದ್ಯಾಪ್ರಸನ್ನ ಶ್ರೀ ಪಾದಂಗಳವರು ಕಲಾವಿದರಿಗೆ ಶಾಲು ಮಂತ್ರಾಕ್ಷತೆಯಿತ್ತು ಹರಸಿದರು.