ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನ ಮೂಡುಪೆರಂಪಳ್ಳಿ ಶಿವಳ್ಳಿ ಗ್ರಾಮ ಇಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ದಿನಾಂಕ 31 ಜನವರಿ 2025ನೇ ಶುಕ್ರವಾರದದಂದು ‘ಸಮರಸೌಗಂಧಿಕ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಳೆಗಳಲ್ಲಿ ಪದ್ಯಾಣ ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ. ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನುಮಂತ), ಕುಮಾರಿ ಅದಿತಿ ಮಂಡೀಚ ಕುಬೇರ ಸಹಕರಿಸಿದರು. ಭಾಗವತ ನಾರಾಯಣ ಶಬರಾಯ ಸ್ವಾಗತಿಸಿ, ಹರಿಕೃಷ್ಣ ಶಿವತಾಯ ವಂದಿಸಿದರು. ರಾಜಶ್ರೀ ಶಬರಾಯ, ನಾರಾಯಣ ಶಬರಾಯ ದಂಪತಿಗಳು ಕಾರ್ಯಕ್ರಮ ಪ್ರಾಯೋಜಿಸಿದ್ದರು.