ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಬರಿಮಾರು ಶ್ರೀ ಮಹಾಮಾಯಿ ದೇವಳದ ಜಾತ್ರೋತ್ಸವದ ಅಂಗವಾಗಿ ದಿನಾಂಕ 17-03-2024ರಂದು ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀಶ ಬೇಂಗ್ರೋಡಿ, ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಮತ್ತು ಮುರಳಿಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಶಂತನು), ಜಯಂತಿ ಹೆಬ್ಬಾರ್ (ದೇವವ್ರತ), ಪ್ರೇಮಲತಾ ರಾವ್ (ಮಂತ್ರಿ), ಕಿಶೋರ್ ದುಗ್ಗಪ್ಪ ನಡುಗಲ್ಲು (ದಾಶರಾಜ) ಮತ್ತು ಮನೋರಮಾ ಜಿ. ಭಟ್ (ಸತ್ಯವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ರಾಕೇಶ್ ಪ್ರಭು ದಂಪತಿಗಳು ಕಲಾವಿದರಿಗೆ ಶ್ರೀದೇವರ ಪ್ರಸಾದವನ್ನಿತ್ತು ಗೌರವಿಸಿದರು.