ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 29 ಸೆಪ್ಟೆಂಬರ್ 2025ರಂದು ಬೊಳುವಾರು ಶ್ರೀ ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ತಾಳಮದ್ದಳೆ ‘ಶ್ರೀ ಕೃಷ್ಣ ರಾಯಭಾರ’ ಎಂಬ ಆಖ್ಯಾನದೊಂದಿಗೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಕುಸುಮಾಕರ ಆಚಾರ್ಯ ಹಳೇನೇರಂಕಿ, ಆನಂದ ಸವಣೂರು, ರಾಮಕೃಷ್ಣ ಭಟ್ ಗುಂಡ್ಯಡ್ಕ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶಂಕರನಾರಾಯಣ ಭಟ್ ಬಟ್ಯಮೂಲೆ, ಅಚ್ಯುತ ಪಾಂಗಣ್ಣಾಯ, ಮಾಸ್ಟರ್ ಪರೀಕ್ಷಿತ್, ಕುಮಾರಿ ಶರಣ್ಯ ನೆತ್ತರಕೆರೆ, ಮಾಸ್ಟರ್ ಅನೀಶ್ ಕೃಷ್ಣ ಪುಣಚ, ಮಾಸ್ಟರ್ ಆದಿತ್ಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ, ಭಾಸ್ಕರ ಶೆಟ್ಟಿ ಸಾಲ್ಮರ ಮತ್ತು ಸುಬ್ಬಪ್ಪ ಕೈಕಂಬ (ಶ್ರೀ ಕೃಷ್ಣ), ದುಗ್ಗಪ್ಪ ನಡುಗಲ್ಲು ಮತ್ತು ಪ್ರೇಮಲತಾ ರಾವ್ (ವಿದುರ), ಮಾಂಬಾಡಿ ವೇಣುಗೋಪಾಲ ಭಟ್ (ಧರ್ಮರಾಯ), ಗುಡ್ಡಪ್ಪ ಬಲ್ಯ (ಕೌರವ), ಕಿಶೋರಿ ದುಗ್ಗಪ್ಪ ನಡುಗಲ್ಲು ಹಾಗೂ ಶಾರದಾ ಅರಸ್ (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ(ಭೀಮ), ಭಾರತಿ ರೈ(ಅರ್ಜುನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ಸಹಕರಿಸಿದರು.