ಕಾಸರಗೋಡು : ಮಠಗಾರ್ ಕುಟುಂಬದ ತರವಾಡು ಮನೆ ಅಡ್ಕಸ್ಥಳ ಇದರ ಶ್ರೀ ಮಹಮ್ಮಾಯಿ ದೇವಸ್ಥಾನ ಮತ್ತು ಪರಿವಾರ ದೈವಗಳ ಆರಾಧನಾ ಕ್ಷೇತ್ರದ 10ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಭಟ್ ಹೊಸ ಮೂಲೆ, ಚೆಂಡೆ ಮದ್ದಳೆಗಳಲ್ಲಿ ನಾರಾಯಣ ಶರ್ಮ ಕಾಟುಕುಕ್ಕೆ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾರತಿ ರೈ (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಗಣೇಶ್ (ರಕ್ತಬೀಜ), ಶುಭಾ ಅಡಿಗ (ಚಂಡ), ಕಿಶೋರಿ ದುಗ್ಗಪ್ಪ ನಡುಗಲ್ಲು (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಕುಸುಮ ಹಾಗೂ ಶ್ರೀ ವಸಂತ ನಾಯ್ಕ ದಂಪತಿಗಳು ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು.

