ಮಂಗಳೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತುಳು ಕೂಟ (ರಿ.) ಮಂಗಳೂರು ಹಾಗೂ ಸರಯೂ ಬಾಲ ಯಕ್ಷ ವೃಂದ (ರಿ.) ಕೋಡಿಕಲ್ ಇದರ ಸಹಯೋಗದೊಂದಿಗೆ ಹಮ್ಮಿಕೊಂಡ ಟಿ. ದಾಮೋದರ ನಿಸರ್ಗ ಸಂಸ್ಮರಣೆ ಮತ್ತು ತುಳು ತಾಳಮದ್ದಳೆ ಸಪ್ತಾಹದ ಅಂಗವಾಗಿ ‘ಪಗರಿದ ಸಂಕ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರ ರವಿವಾರದಂದು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜರುಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಮತ್ತು ಮಧುಸೂದನ ಅಲೆವೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಹನೂಮಂತ), ಗುಡ್ಡಪ್ಪ ಬಲ್ಯ (ಅರ್ಜುನ), ಭಾಸ್ಕರ ಶೆಟ್ಟಿ ಸಾಲ್ಮರ (ವೃದ್ಧ ವಿಪ್ರ ಮತ್ತು ಶ್ರೀ ರಾಮ) ಸಹಕರಿಸಿದರು. ಕಲಾವಿದರನ್ನು ದೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಶಾಲು ಹೊದಿಸಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ತುಳು ಕೂಟ (ರಿ.) ಮಂಗಳೂರು ಇದರ ಸಂಚಾಲಕ ರವಿ ಅಲೆವೂರಾಯ ವಂದಿಸಿದರು.


