ಮಂಗಳೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ದಶಮಾನ ವರ್ಷ ಸಂಭ್ರಮಾಚರಣೆ ಪ್ರಯುಕ್ತ ದಿನಾಂಕ 22 ಡಿಸೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ‘ಶ್ರೀ ರಾಮ ನಿರ್ಯಾಣ’ ಎಂಬ ಆಖ್ಯಾನದೊಂದಿಗೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಚೆಂಡೆ ಮದ್ದಳೆಗಳಲ್ಲಿ ಶಿವಪ್ರಸಾದ್ ಪುನರೂರು, ಕೆ. ರಾಮ ಹೊಳ್ಳ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಣ), ಹರಿಣಾಕ್ಷಿ ಜೆ. ಶೆಟ್ಟಿ (ದೂರ್ವಾಸ), ಸತ್ಯಭಾಮ ಕಾರಂತ (ಕಾಲಪುರುಷ) ಸಹಕರಿಸಿದರು. ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಸಂಘದ ಸಂಚಾಲಕರಾದ ವಾಸುದೇವ ರಾವ್ ಸ್ವಾಗತಿಸಿ, ಅಧ್ಯಕ್ಷೆ ಸುಲೋಚನಾ ವಿ. ರಾವ್ ವಂದಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಂಜನೇಯ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತು ಸಂಘದ ಹಿರಿಯ ಕಲಾವಿದೆ ಶುಭಾ ಅಡಿಗ ದಶಮಾನ ಸಂಭ್ರಮದಲ್ಲಿ ಇರುವ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಗೆ ಶುಭ ಹಾರೈಸಿದರು.

