ಉಪ್ಪಿನಂಗಡಿ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ (ರಿ.) ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆಸಲ್ಲಡುತ್ತಿರುವ ಶ್ರೀ ಮಹಾಭಾರತ ಸರಣಿಯ ಸುವರ್ಣ ಶತಕ ತಾಳಮದ್ದಳೆಯ ಅಂಗವಾಗಿ ದಿನಾಂಕ 06 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ಉಪ್ಪಿನಂಗಡಿ ರಾಮ ನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ‘ಕರ್ಣ ಭೇದನ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಯಲ್.ಯನ್. ಭಟ್, ಚೆಂಡೆ ಮದ್ದಳೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಕರ್ಣ), ದುಗ್ಗಪ್ಪ ನಡುಗಲ್ಲು (ಸೂರ್ಯ), ಕಿಶೋರಿ ದುಗ್ಗಪ್ಪ ನಡುಗಲ್ಲು (ಕುಂತಿ) ಸಹಕರಿಸಿದರು.