ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಕೃಷ್ಣ ಸೇವಾ ಟ್ರಸ್ಟ್ (ರಿ.) ಪುತ್ತೂರು, ವಲಯ ಕಡಬ ಇದರ ವಾರ್ಷಿಕ ಮಹಾಸಭೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07 ಸೆಪ್ಟೆಂಬರ್ 2025ರಂದು ಸವಣೂರಿನ ಶ್ರೀ ವಿನಾಯಕ ಸಭಾಭವನದಲ್ಲಿ ‘ಶ್ರೀ ಕೃಷ್ಣ ಸಂಧಾನ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಕುಮಾರಿ ಶ್ರೇಯಾ ಇಡ್ಯಾಡಿ, ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ತಾರಾನಾಥ ಸವಣೂರು ಸಹಕರಿಸಿದರು. ಮುಮ್ಮೇಳದಲ್ಲಿ ನಾ ಕಾರಂತ ಪೆರಾಜೆ (ಶ್ರೀ ಕೃಷ್ಣ), ಭಾಸ್ಕರ ಬಾರ್ಯ (ವಿದುರ), ಗುಡ್ಡಪ್ಪ ಬಲ್ಯ (ಕೌರವ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ, ವಲಯಾಧ್ಯಕ್ಷ ವಾಸುದೇವ ಇಡ್ಯಾಡಿ ಕಲಾವಿದರನ್ನು ಗೌರವಿಸಿ, ವಂದಿಸಿದರು.