ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯು ದಿನಾಂಕ 18 ಮೇ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ವಿದೂರಾತಿಥ್ಯ’ – ‘ಪ್ರಮೀಳಾರ್ಜುನ’ ಪ್ರಸಂಗದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಸತೀಶ್ ಇರ್ದೆ, ತನ್ವೀ ಯಸ್. ಅನಂತಾಡಿ ಭಾಗವತರಾಗಿ ಚೆಂಡೆಮದ್ದಲೆಗಳಲ್ಲಿ ಹಿರಿಯ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಈಶ್ವರಮಂಗಳ, ಆದಿತ್ಯ ಕೃಷ್ಣ ದ್ವಾರಕ, ಅನೀಶ್ ಕೃಷ್ಣಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ವಿ.ಕೆ. ಶರ್ಮ ಅಳಿಕೆ), ವಿದುರ ಮತ್ತು ದೂತಿ (ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಅರ್ಜುನ (ಗುಡ್ಡಪ್ಪ ಬಲ್ಯ) ಮತ್ತು ಪ್ರಮೀಳ (ಶುಭಾ ಜೆ.ಸಿ. ಅಡಿಗ) ಸಹಕರಿಸಿದರು. ಪದ್ಮನಾಭ ಹಂದ್ರಟ್ಟ ಕಾರ್ಯಕ್ರಮ ಪ್ರಾಯೋಜಿಸಿದ್ದರು.