ಕಾಸರಗೋಡು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ ಕಾಸರಗೋಡು ಸಮೀಪದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ಇರುವ ಶ್ರೀ ಮಹಾಬಲ ಶೆಟ್ಟಿ (ದೇವಕೀತನಯ) ಇವರ ಮನೆ ‘ಶ್ರೀ ರಾಮ ಧಾಮ’ದಲ್ಲಿ ದಿನಾಂಕ 06 ಏಪ್ರಿಲ್ 2025ರಂದು ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ಆಖ್ಯಾನದೊಂದಿಗೆ ತಾಳಮದ್ದಳೆ ಕಾರ್ಯಕ್ರಮ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಮುರಳೀ ಮಾಧವ ಮಧೂರು, ಗೋಪಾಲಕೃಷ್ಣ ಮಧೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಭೀಮ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಹನೂಮಂತ), ಶುಭಾ ಗಣೇಶ್ (ಕುಬೇರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಹರಿದಾಸ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ವಂದಿಸಿದರು. ಕೂಡ್ಲು ಕುಟುಂಬಸ್ಥರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.