ಮಂಗಳೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮಂಗಳೂರು ಅವರ ವತಿಯಿಂದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಬ್ರಹ್ಮ ಬೈದರ್ಕಳ ಗರಡಿ ಸಭಾಭವನದಲ್ಲಿ ದಿನಾಂಕ 01 ಡಿಸೆಂಬರ್ 2024ರಂದು ನಡೆಯಿತು.
ಗುಡ್ಡೆಗುತ್ತು ಸೂರ್ಯ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಗಟ್ಟಿಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ತಾಲೂಕಿನ ಯೋಜನಾಧಿಕಾರಿ ಮಮತಾ ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಗೀತಾ ಪ್ರವೀಣ್, ಬ್ರಹ್ಮ ಬೈದ್ರಕಳ ಗರಡಿ ಕ್ಷೇತ್ರದ ಅರ್ಚಕ ಗುರುಪ್ರಸಾದ್, ಮಂಗಳೂರು ವಲಯಧ್ಯಕ್ಷ ಸರಳ ಉಪಸ್ಥಿತರಿದ್ದರು. ಉಪನ್ಯಾಸಕಿ ಪಲ್ಲವಿ ಹಾಗೂ ಸುರೇಶ್ ನೆಗಳಗುಳಿ ಉಪನ್ಯಾಸ ನೀಡಿದರು. ಮಂಗಳೂರು ವಲಯ ಮೇಲ್ವಿಚಾರಕಿ ಶೋಭಾ ಐ. ಸ್ವಾಗತಿಸಿ, ಸಮನ್ವಯ ಅಧಿಕಾರಿ ಆಶಾಚಂದ್ರ ನಿರೂಪಿಸಿದರು.