ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ರಂಗ ಅಧ್ಯಯನ ಕೇಂದ್ರದ ಆಯೋಜನೆಯಲ್ಲಿ ಮತ್ತು ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನಡ ವಿಭಾಗ, ಅರೆಹೊಳೆ ಪ್ರತಿಷ್ಠಾನ ಮತ್ತು ಅಸ್ತಿತ್ವ (ರಿ.) ಮಂಗ್ಳುರ್ ಇವರ ಸಹಯೋಗದಲ್ಲಿ ‘ತಮಾಷಾ’ ನಾಲ್ಕು ದಿನಗಳ ವಿದ್ಯಾರ್ಥಿ ನಾಟಕೋತ್ಸವವು ದಿನಾಂಕ 14 ಆಗಸ್ಟ್ 2025ರಿಂದ 17 ಆಗಸ್ಟ್ 2025ರವರೆಗೆ ಪ್ರತಿ ದಿನ ಸಂಜೆ 6-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 14 ಆಗಸ್ಟ್ 2025ರಂದು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ರಂಗ ಅಧ್ಯಯನ ಕೇಂದ್ರದ ತಂಡದವರು ರೋಹಿತ್ ಬೈಕಾಡಿ ಇವರ ನಿರ್ದೇಶನದಲ್ಲಿ ‘ಸೈರನ್’ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 15 ಆಗಸ್ಟ್ 2025ರಂದು ಕಲಾಯುಗ ತಂಡದವರಿಂದ ಚರಿತ್ ಸುವರ್ಣ ಇವರ ನಿರ್ದೇಶನದಲ್ಲಿ ‘ಹುಡುಕಾಟದಲ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 16 ಆಗಸ್ಟ್ 2025ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕಲಾಬ್ಧಿ ತಂಡದವರಿಂದ ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ‘ಕೂಸಿನ ಕಂಡಿರಾ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 17 ಆಗಸ್ಟ್ 2025ರಂದು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ರಂಗ ಅಧ್ಯಯನ ಕೇಂದ್ರದ ತಂಡದವರಿಂದ ಕ್ಲ್ಯಾನ್ವಿನ್ ಫೆರ್ನಾಂಡೀಸ್ ಇವರ ನಿರ್ದೇಶನದಲ್ಲಿ ‘ಹ್ಯಾಂಗ್ ಆನ್’ ನಾಟಕ ಪ್ರಸ್ತುತಗೊಳ್ಳಲಿದೆ.