ಮೈಸೂರು : ತರಂಗಂ ಟ್ರಸ್ಟ್ (ರಿ.) ತಲಕಾಡು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ‘ತರಂಗಂ ನಾಟಕೋತ್ಸವ 2025’ವನ್ನು ದಿನಾಂಕ 26ರಿಂದ 28 ಜುಲೈ 2025ರವರೆಗೆ ಸಂಜೆ 6-30 ಗಂಟೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 26 ಜುಲೈ 2025ರಂದು ಮೈಸೂರಿನ ‘ನಟನ ರಂಗಶಾಲೆ’ಯ ತಂಡದವರಿಂದ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ‘ಕಟ್ಟೆ ಪುರಾಣ’, ದಿನಾಂಕ 27 ಜುಲೈ 2025ರಂದು ಮೈಸೂರಿನ ‘ಸಂಚಲನ’ ತಂಡದವರಿಂದ ದೀಪಕ್ ಮೈಸೂರು ಇವರ ನಿರ್ದೇಶನದಲ್ಲಿ ‘ಹರಕೆಯ ಕುರಿ’ ಮತ್ತು ದಿನಾಂಕ 28 ಜುಲೈ 2025ರಂದು ಹಾಸನದ ವಿಶ್ವಪಥ ಚಾರಿಟಬಲ್ ಟ್ರಸ್ಟ್ (ರಿ.) ತಂಡದವರಿಂದ ಪ್ರದೀಪ್ ಹಾಸನ ಇವರ ನಿರ್ದೇಶನದಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ ನಡೆಯಲಿದೆ.