ಕೊಪ್ಪ : ಶ್ರೀ ಆದಿ ಶಂಕರಾಚಾರ್ಯ ಶಾರದಾ ಶ್ರೀಲಕ್ಷ್ಮೀನೃಸಿಂಹ ಪೀಠಮ್ ಹರಿಹರಪುರ ಕೊಪ್ಪ ಇದರ ವತಿಯಿಂದ ಹೊಸೂರು ಸಾಗರದ ಶ್ರೀ ಭಾರತೀ ಕಲಾ ಪ್ರತಿಷ್ಠಾನ (ರಿ.) ಇದರ ಶ್ರೀ ವರದಾಂಬ ಕಲಾ ತಂಡ ಇವರಿಂದ ಆಲೆಟ್ಟಿ ರಾಮಣ್ಣ ಶಗ್ರಿತ್ತಾಯ ವಿರಚಿತ ‘ತರಣಿಸೇನ ಕಾಳಗ’ ಎಂಬ ಪ್ರಸಂಗದ ತಾಳಮದ್ದಲೆಯನ್ನು ದಿನಾಂಕ 29 ಮಾರ್ಚ್ 2025ರಂದು ಸಂಜೆ 4-30 ಗಂಟೆಗೆ ಕೊಪ್ಪ ತಾಲೂಕು ಹರಿಹರಪುರದ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಶಿವಶಂಕರ ಭಟ್ ಮತ್ವಾನೆ ಭಾಗವತರಾಗಿ, ಗಣೇಶ ಭಟ್ ಹೊನ್ನೇಕುಡಿಗೆ ಮದ್ದಲೆಯಲ್ಲಿ ಮತ್ತು ಜನಾರ್ದನ ಮಂಡಗಾರು ಚಂಡೆಯಲ್ಲಿ ಹಾಗೂ ಮುಮ್ಮೇಳದಲ್ಲಿ ಶಾರದಾ ಅರುಣ ಇವರು ಶ್ರೀರಾಮನಾಗಿ, ವರದಾ ಮಧುಸೂದನ ಐತಾಳ್ ಇವರು ವಿಭೀಷಣ, ಸ್ಮಿತಾ ಗಿರೀಶ್ ಇವರು ರಾವಣ ಮತ್ತು ಸಾಧ್ವಿ ಗಣೇಶ್ ಇವರು ತರಣಿಸೇನನಾಗಿ ಸಹಕರಿಸಲಿದ್ದಾರೆ.