ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ಡಾ. ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ‘ತೌಳವ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 12 ಏಪ್ರಿಲ್ 2025ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ‘ಸಾಹಿತ್ಯ ಸದನ’ದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಕ.ಲೇ.ವಾ. ಸಂಘ ಇವರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ವಹಿಸಲಿದ್ದು, ಲೇಖಕಿ ಪತ್ರಕರ್ತೆ ಶ್ರೀಮತಿ ಜಯಂತಿ ಎಸ್. ಬಂಗೇರ ಇವರಿಗೆ ‘ತೌಳವ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.