ಬೆಂಗಳೂರು : ತೋಟಗಾರಿಕಾ ಇಲಾಖೆ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ.) ಕೊಟ್ಟಿಗೆಹಾರ ಇವರ ಸಹಯೋಗದಲ್ಲಿ ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನದ ಅಂಗವಾಗಿ ‘ತೇಜಸ್ವಿ ನಾಟಕೋತ್ಸವ’ವನ್ನು ದಿನಾಂಕ 16, 18, 20, 21, 22, 24 25 ಜನವರಿ 2026ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿವೆ.
ದಿನಾಂಕ 16 ಜನವರಿ 2026ರಂದು ಬೆಂಗಳೂರಿನ ಕಲಾಮಾಧ್ಯಮ ತಂಡದವರಿಂದ ‘ನನ್ನ ತೇಜಸ್ವಿ’, ದಿನಾಂಕ 18 ಜನವರಿ 2026ರಂದು ಬೆಂಗಳೂರಿನ ರೂಪಾಂತರ ತಂಡದವರಿಂದ ‘ಕರ್ವಾಲೋ’, ದಿನಾಂಕ 20 ಜನವರಿ 2026ರಂದು ಬೆಂಗಳೂರಿನ ರಂಗ ದರ್ಶನ ಕಲಾ ಕೇಂದ್ರ ತಂಡದವರಿಂದ ‘ಕೃಷ್ಣೇಗೌಡನ ಆನೆ’, ದಿನಾಂಕ 21 ಜನವರಿ 2026ರಂದು ಬೆಂಗಳೂರಿನ ವಿಶ್ವಪಥ ಕಲಾ ಸಂಗಮ ತಂಡದವರಿಂದ ‘ಪಾಕ ಕ್ರಾಂತಿ’, ದಿನಾಂಕ 22 ಜನವರಿ 2026ರಂದು ಬೆಂಗಳೂರಿನ ಸಮುದಾಯ ತಂಡದವರಿಂದ ‘ಜುಗಾರಿ ಕ್ರಾಸ್’, ದಿನಾಂಕ 24 ಜನವರಿ 2026ರಂದು ಬೆಂಗಳೂರಿನ ಪ್ರಯೋಗ ರಂಗ ತಂಡದವರಿಂದ ‘ಯಮಳ ಪ್ರಶ್ನೆ’, ದಿನಾಂಕ 25 ಜನವರಿ 2026ರಂದು ಬೆಂಗಳೂರಿನ ಪ್ರವರ ಥಿಯೇಟರ್ ತಂಡದವರಿಂದ ‘ಅಣ್ಣನ ನೆನಪು’ ನಾಟಕಗಳು ಪ್ರದರ್ಶನಗೊಳ್ಳಲಿದೆ.

