ಹೈದರಾಬಾದ್ : ‘ಗದ್ದರ್’ ಎಂದೇ ಮನೆಮಾತಾಗಿದ್ದ ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಹಾಗೂ ‘ಪ್ರಜಾ ಗಾಯಕ’ ಗುಮ್ಮಡಿ ವಿಠ್ಠಲ್ ರಾವ್ (77) ಅನಾರೋಗ್ಯದಿಂದ ದಿನಾಂಕ 06-08-2023ರಂದು ಇಹಲೋಕ ವನ್ನು ತ್ಯಜಿಸಿದ್ದಾರೆ.
1949ರಲ್ಲಿ ತೆಲಂಗಾಣದ ತುಪ್ರಾನ್ ನಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಗದ್ದರ್ ನಿಜಾಮಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಅವರು, ತೆಲುಗಿನ ಕೆಲವು ಕ್ರಾಂತಿಕಾರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ನಂತರದಲ್ಲಿ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಮ್ಮನ್ನು ತಾವು ಸಂಪೂರ್ಣವಾಗಿ ಸಾಮಾಜಿಕ ಹೋರಾಟಗಳಿಗೆ ಅರ್ಪಿಸಿಕೊಂಡರು. ತಮ್ಮ ಕ್ರಾಂತಿ ಗೀತೆಗಳ ಮೂಲಕ ಯುವಕರನ್ನು ಮಾವೋವಾದಿ ಚಳವಳಿ ಹಾಗೂ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಗದ್ದರ್ ಸೆಳೆದಿದ್ದರು. 2010ರವರೆಗೂ ‘ನಕ್ಸಲ್ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಅವರು, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.