ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ಚಂಡೆ ಮದ್ದಳೆ ತರಬೇತಿ ತರಗತಿಯು ದಿನಾಂಕ 22/8/2023 ಮಂಗಳವಾರ ಪ್ರಾರಂಭಗೊಂಡಿತು.ಈ ಕಾರ್ಯಕ್ರಮವನ್ನು ಗಣಪತಿ ಸ್ತುತಿಯೊಂದಿಗೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.
ಯಕ್ಷಗಾನ ಮಂಡಳಿಯ ನಿರ್ದೇಶಕರು ಹಾಗೂ ಗುರುಗಳೂ ಆದ ಶ್ರೀ ಮುರಳೀಧರ ಭಟ್, ತರಬೇತಿ ಗುರುಗಳಾದ ಶ್ರೀ ಆನಂದ ಗುಡಿಗಾರ್ ಕೆರ್ವಾಶೆ, ಭಾಗವತರಾದ ಶ್ರೀ ನಕ್ರೆ ನಾಗರಾಜ್ ಭಟ್, ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯಕರ್ ಬೈಲೂರು, ಕಾರ್ಯದರ್ಶಿ ಶ್ರೀ ವಾದಿರಾಜ ಆಚಾರ್ಯ, ಕೋಶಾಧಿಕಾರಿ ಶ್ರೀ ಮೋಹನ ಆಚಾರ್ಯ, ಸಹ ಕಾರ್ಯದರ್ಶಿ ಶ್ರೀ ಪತಿ ನಾಯಕ್, ಶ್ರೀ ಕಿಶೋರ್.ಸಿ.ಉದ್ಯಾವರ, ರಾಮಕೃಷ್ಣ ಕೊಂಡಂಚ, ನಾರಾಯಣರಾವ್, ಗೌರವಾಧ್ಯಕ್ಷ ಶ್ರೀ ಜಯರಾಮ ಆಚಾರ್ಯ ಹಾಗೂ ಸಂಘದ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ತರಗತಿಗಳು ಪ್ರತಿ ಮಂಗಳವಾರ ಸಂಜೆ 6.00ರಿಂದ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9844634464, 9481426796 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.