ಉಡುಪಿ : ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ಇದರ ವತಿಯಿಂದ ಪೆರ್ಡೂರು ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆಯುವ ‘ವರ್ಣಾನನ’ ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರವು ಉಚಿತವಾಗಿ ದಿನಾಂಕ 01-11-2023ರಂದು ಬೆಳಗ್ಗೆ 10ರಿಂದ 5ರವರೆಗೆ ಕುಕ್ಕಿಕಟ್ಟೆ ಬೆಳ್ಳಂಪಳ್ಳಿ, ಜೈ ಹಿಂದ್ ಶಾಲೆಯ ಎದುರು ಇರುವ ನರಸಿಂಹ ಪ್ರತಿಷ್ಠಾನದಲ್ಲಿ ನಡೆಯಲಿದೆ.
ಪೃಥ್ವೀಶ್ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರುಗಳು ಈ ಕಾರ್ಯಾಗಾರದಲ್ಲಿ ಅಭ್ಯಾಗತರಾಗಿ ತಿದ್ದಿ ತೀಡುವವರು. ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ 7353144990 8217054775
ಅಗತ್ಯ ಸೂಚನೆಗಳು
1. ಕನ್ನಡಿ, ಬಣ್ಣದ ಬಟ್ಟೆಯನ್ನು (ಬಣ್ಣವನ್ನು ಒರೆಸಿಕೊಳ್ಳಲು) ತರತಕ್ಕದ್ದು.
2. ಕಣ್ಣಿಗೆ ಕಾಡಿಗೆ (eye liner), ತಲೆಗೆ ಎಣ್ಣೆ ಇತ್ಯಾದಿಗಳನ್ನು ಹಾಕಿಕೊಂಡು ಬರಬಾರದು.
3. ಸಂಸ್ಥೆಯ ವತಿಯಿಂದ ಊಟ, ಉಪಹಾರದ ವ್ಯವಸ್ಥೆಗಳಿರುವುದಿಲ್ಲ. ನೀವು ಮನೆಯಿಂದ ತಂದುಕೊಳ್ಳಬಹುದು.
4. ಸಮಯಕ್ಕೆ ಸರಿಯಾಗಿ ಬರತಕ್ಕದ್ದು. ಮಧ್ಯೆ ಮಧ್ಯೆ ಸೇರಿಕೊಳ್ಳುವಂತಿಲ್ಲ.
5. ಬಣ್ಣ ಒರೆಸಿಕೊಳ್ಳಲು ಎಣ್ಣೆ, ಸಾಬೂನು ಇತ್ಯಾದಿ ಅಗತ್ಯ ಸಾಮಾಗ್ರಿಗಳನ್ನು ತರಬಹುದು.
6. ಬರುವವರು ಹೆಸರು ನೋಂದಾಯಿಸ ತಕ್ಕದ್ದು, ವಾಟ್ಸ್ಅಪ್ ನಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸ ಕಳುಹಿಸಿಕೊಡಬೇಕು. ಆಸಕ್ತರು ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರತಿಷ್ಠಾನದಿಂದ ಈ ಮೂಲಕ ವಿನಂತಿಸಿಕೊಂಡಿದ್ದಾರೆ.