ಮಂಗಳೂರು : ಸುರತ್ಕಲ್ ತಡಂಬೈಲ್ ಇಲ್ಲಿರುವ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಇದರ ‘ದಶಮಾನ ವರ್ಷ ಸಂಭ್ರಮಾಚರಣೆ’ ಸಮಾರೋಪ ಸಮಾರಂಭ ಹತ್ತು ದಿನಗಳ ಕಾರ್ಯಕ್ರಮವನ್ನು ದಿನಾಂಕ 22ರಿಂದ 31 ಡಿಸೆಂಬರ್ 2025ರವರೆಗೆ ಪ್ರತಿ ದಿನ ಸಂಜೆ 4-00 ಗಂಟೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 22 ಡಿಸೆಂಬರ್ 2025ರಂದು ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರಿಂದ ಕವಿ ಹೊಸ್ತೋಟ ಮಂಜುನಾಥ ವಿರಚಿತ ‘ಶ್ರೀ ರಾಮ ನಿರ್ಯಾಣ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ದಶದಿಶಾ, ದಶಯಶಾ ಹತ್ತರಹೊತ್ತು’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಶ್ರೀ ವಿನಾಯಕ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾದ ಬಾಲಕೃಷ್ಣ ಸುವರ್ಣ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 23 ಡಿಸೆಂಬರ್ 2025ರಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕವಿ ಮಧುಕುಮಾರ್ ಬೋಳೂರು ವಿರಚಿತ ‘ಸುದರ್ಶನ ವಿಜಯ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಹರಿನಾರಾಯಣ ದಾಸ ಅಸ್ರಣ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳ ಗುರು ಹರಿನಾರಾಯಣ ಬೈಪಾಡಿತ್ತಾಯ ಮತ್ತು ಯಕ್ಷಗಾನ ಸಂಘಟಕರಾದ ಧನಂಜಯ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 24 ಡಿಸೆಂಬರ್ 2025ರಂದು ಮಂಗಳೂರು ಅಶೋಕ ನಗರ ಶ್ರೀ ಭ್ರಾಮರಿ ಮಹಿಳಾ ಕಲಾವೃಂದದವರಿಂದ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಶ್ರೀ ರಾಮ ದರ್ಶನ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಎಸ್. ಅಶೋಕ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ವಸಂತ ಶಾಸ್ತ್ರಿ ಮತ್ತು ಶ್ರೀಮತಿ ವೀಣಾ ಕೃಷ್ಣಮೂರ್ತಿ ರಾವ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 25 ಡಿಸೆಂಬರ್ 2025ರಂದು ಸುರತ್ಕಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕವಿ ಡಾ. ದಿನಕರ್ ಪಚ್ಚನಾಡಿ ವಿರಚಿತ ‘ಪಾಂಚಜನ್ಯೋತ್ಪತ್ತಿ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಕಿಶನ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಿನೇಶ ಹಳೆಯಂಗಡಿ ಮತ್ತು ಶ್ರೀಮತಿ ಅನುರಾಧ ನಾಗರಾಜ ರಾವ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 26 ಡಿಸೆಂಬರ್ 2025ರಂದು ಸುರತ್ಕಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕವಿ ಅಗರಿ ಶ್ರೀನಿವಾಸ ಭಾಗವತರು ವಿರಚಿತ ‘ಶಾಂಭವಿ ವಿಜಯ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಮೂಡಬಿದ್ರೆ ಧನಲಕ್ಷ್ಮಿ ಕೇಶ್ಯೂ ಇಂಡಸ್ಟ್ರೀಸ್ ಇದರ ಮಾಲಕರಾದ ಕೆ. ಶ್ರೀಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಮತಿ ಚಂದ್ರಿಕಾ ರಘುನಂದನ್ ಮತ್ತು ಶ್ರೀ ರಘುನಂದನ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 27 ಡಿಸೆಂಬರ್ 2025ರಂದು ಮಂಗಲ್ಪಾಡಿ ಯಕ್ಷ ಮೌಕ್ತಿಕ ಮಹಿಳಾ ಕೂಟದವರಿಂದ ಕವಿ ದ್ವಜಪುರ ನಾಗಪ್ಪಯ್ಯ ವಿರಚಿತ ‘ನಳದಮಯಂತಿ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಪ್ರೊಫೆಸರ್ ಸತ್ಯಮೂರ್ತಿ ಐತಾಳ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಘುರಾಮ ಉಪಾಧ್ಯಾಯ ಮತ್ತು ಶ್ರೀ ರಂಗನಾಥ ಭಟ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 28 ಡಿಸೆಂಬರ್ 2025ರಂದು ಕಾರ್ಕಳ ಶ್ರೀ ಅನಂತ ಶಯನ ಮಹಿಳಾ ಯಕ್ಷಕಲಾ ಮಂಡಳಿಯವರಿಂದ ಕವಿ ಪಾರ್ತಿಸುಬ್ಬ ವಿರಚಿತ ‘ರಾವಣ ವಧೆ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಸರೋಜ ತಾರಾನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಗಣೇಶ್ ಕಾರ್ಣಿಕ್ ಮತ್ತು ಶ್ರೀ ಉಮೇಶ ಅಂಚನ್ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 29 ಡಿಸೆಂಬರ್ 2025ರಂದು ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಗಾನ ಬಳಗದವರಿಂದ ಕವಿ ಶ್ರೀಧರ ಡಿ.ಎಸ್. ವಿರಚಿತ ‘ಪಾಂಡವ ಸ್ವರ್ಗಾರೋಹಣ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಹಿರಿಯ ವಕೀಲರಾದ ಕೆ.ಆರ್. ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಕುಮಾರಿ ಹೇಮಸ್ವಾತಿ ಕುರ್ಯಾಜೆ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 30 ಡಿಸೆಂಬರ್ 2025ರಂದು ಪುತ್ತೂರು ಡಾ. ಶಿವರಾಮ ಕಾರಂತ ಬಾಲವನದ ಸಾಯಿಕಲಾ ಯಕ್ಷ ಬಳಗದವರಿಂದ ಕವಿ ದೇವಿದಾಸ ವಿರಚಿತ ‘ದಕ್ಷಾಧ್ವರ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಶ್ರೀ ವಿಶ್ವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅರುಣಾಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅನಂತ ಬೈಪಾಡಿತ್ತಾಯ ಇವರನ್ನು ಸನ್ಮಾನಿಸಲಾಗುವುದು.
ದಿನಾಂಕ 31 ಡಿಸೆಂಬರ್ 2025ರಂದು ಸುರತ್ಕಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯವರಿಂದ ಕವಿ ಪಾರ್ತಿಸುಬ್ಬ ವಿರಚಿತ ‘ಭರತಾಗಮನ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಯಕ್ಷಗಾನ ಕಲಾವಿದ ಸರ್ಪಂಗಳ ಈಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯೆ ಶ್ರೀಮತಿ ಅನು ರಾಘವೇಂದ್ರ ರಾವ್ ಇವರನ್ನು ಸನ್ಮಾನಿಸಲಾಗುವುದು.

