ಬೆಂಗಳೂರು : ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸುವ ‘ಅಭಿನಯ ಕಾರ್ಯಾಗಾರ’ವು ದಿನಾಂಕ 07 ಜುಲೈ 2025ರಿಂದ ಪ್ರಾರಂಭವಾಗಲಿದೆ. 16 ವರ್ಷ ಮೇಲ್ಪಟ್ಟ ಆಸ್ತಕರಿಗೆ ಸೋಮವಾರದಿಂದ ಶುಕ್ರವಾರ ಬೆಳಗ್ಗೆ ಗಂಟೆ 6-00ರಿಂದ 7-30ರ ತನಕ ಹಾಗೂ ಸಂಜೆ ಗಂಟೆ 7-00ರಿಂದ 9-00 ಗಂಟೆಗೆ ಎರಡು ತಿಂಗಳುಗಳ ಈ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ 90088 30011 ಮತ್ತು 73384 73842 ಸಂಖ್ಯೆಯನ್ನು ಸಂಪರ್ಕಿಸಿರಿ.
ಸಂಸ್ಥೆಯ ಬಗ್ಗೆ :
ಸ್ಟೇಜ್ ಬೆಂಗಳೂರು ಕರ್ನಾಟಕ ಸರ್ಕಾರದ ಅಧೀನದಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ಯುವ ಪೀಳಿಗೆ ಮತ್ತು ರಂಗಭೂಮಿ ಉತ್ಸಾಹಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯೊಂದಿಗೆ ದಿನಾಂಕ 07 ಏಪ್ರಿಲ್ 2019ರಂದು ಸ್ಥಾಪಿಸಲಾಗಿದೆ. ಇದು ಭಾರತದಾದ್ಯಂತ ವ್ಯವಸ್ಥಿತವಾಗಿ ಸಾಂಸ್ಕೃತಿಕ ಮತ್ತು ನಾಟಕ ಪ್ರದರ್ಶನಗಳ ಪ್ರಚಾರ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಾವು ವೃತ್ತಿಪರವಾಗಿ ಸಾಂಸ್ಕೃತಿಕ ಮತ್ತು ರಂಗಭೂಮಿ ಸಂಬಂಧಿತ ಚಟುವಟಿಕೆಗಳಲ್ಲಿ ತರಬೇತಿ, ಅಭ್ಯಾಸ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ.
ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ವಿವಿಧ ಐಟಿ ಕಂಪನಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಪ್ರದರ್ಶನ ಕಲೆ ಆಧಾರಿತ ಶಿಕ್ಷಣ ಮತ್ತು ನಾಟಕ ಶಿಕ್ಷಣವನ್ನು ನೀಡಿದೆ. ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ತನ್ನ 4+ ವರ್ಷಗಳ ಪಯಣದಲ್ಲಿ ರಾಜ್ಯಾದ್ಯಂತ 3+ ನಾಟಕೋತ್ಸವ ಮತ್ತು ಅನೇಕ ನಾಟಕ ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಸಂಸ್ಥೆಯು ರಂಗಭೂಮಿಯ ಜೊತೆಗೆ ಸಿನೆಮಾ, ಕಿರುಚಿತ್ರ, ಕ್ರೀಡೆ, ಸಂಗೀತ, ನೃತ್ಯ, ಮಾಡಲ್ಲಿಂಗ್, ಮೇಕ್ಅಪ್, ಕಾರ್ಪೊರೇಟ್ ಇವೆಂಟ್ಗಳು, ಸಮಾಜಮುಖಿ ಕೆಲಸಗಳು, ಮಕ್ಕಳ ಕಾರ್ಯಕ್ರಮಗಳು ಹೀಗೆ ಅನೇಕ ಚಟುವಟಿಕೆಗಳನ್ನು ನಡೆಸಿ ಯಶಸ್ವಿಯಾಗಿದೆ.
ಸಂಸ್ಥೆಯ ಸ್ಥಾಪಕ ಯೋಗೇಶ್ ಎಸ್. ಇವರ ಬಗ್ಗೆ :
ಓದಿನಲ್ಲಿ ಪದವಿ ಪಡೆದು, ನಂತರ ಒಂದು ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ, ಚಿಕ್ಕಂದಿನಿಂದ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಮೇಲೆ ಎಲ್ಲಿಲ್ಲದ ಆಸಕ್ತಿ, ಒಲವು ಹಾಗೆಯೇ ಕಾಲಕ್ರಮೇಣ ಈ ಕ್ಷೇತ್ರಗಳಲ್ಲಿ ಏನಾದರೂ ಸಾಧಿಸಬೇಕೆಂಬ ಧೃಢ ನಿರ್ಧಾರದಿಂದ ಇಟ್ಟ ಮೊದಲನೇ ಹೆಜ್ಜೆಯೇ ಸ್ಟೇಜ್ ಬೆಂಗಳೂರು ಸಂಸ್ಥೆಯ ಸ್ಥಾಪನೆ. ಮೊದಲಿನಿಂದ ಇಲ್ಲಿಯವರೆಗೂ ಸ್ಟೇಜ್ ಬೆಂಗಳೂರು ಅನೇಕ ಕಾರ್ಯಕ್ರಮಗಳನ್ನು ಮಾಡಿ ಸೈ ಏನಿಸಿಕೊಂಡು ಬಂದಿದೆ, ಅನೇಕ ರಂಗಭೂಮಿ ದಿಗ್ಗಜರುಗಳ ಆಶೀರ್ವಾದ ನನ್ನನ್ನು ಒಬ್ಬ ಯಶಸ್ವಿ ಸಂಘಟಕನಾಗಿ ರೂಪಿಸಿದೆ. 4 ವರ್ಷದ ನನ್ನ ಈ ಅಳಿಲು ಕಲಾ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಜಂಟಿಯಾಗಿ 2019-20ನೇ ಸಾಲಿನ ‘ಸುವರ್ಣ ಕನ್ನಡಿಗ’ ರಾಜ್ಯ ಪ್ರಶಸ್ತಿ, 2020-21ನೇ ಸಾಲಿನ ‘ರತ್ನ ಶ್ರೀ’ ರಾಜ್ಯ ಪ್ರಶಸ್ತಿ ಹಾಗೂ 2021-22ನೇ ಸಾಲಿನ ‘ಡಾ. ರಾಜಕುಮಾರ್ ಸದ್ಭಾವನಾ’ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.