ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ರಂಗಕರ್ಮಿ ಎಚ್. ಷಡಾಕ್ಷರಪ್ಪ ದಿನಾಂಕ 21 ಮಾರ್ಚ್ 2025ರ ಶುಕ್ರವಾರದಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ನಾಟಕ ಅಕಾಡೆಮಿ ಸದಸ್ಯರಾಗಿದ್ದ ಷಡಾಕ್ಷರಪ್ಪ ಅವರು ಗೋಣಿಬಸವೇಶ್ವರ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಬಾಗಳಿಯಲ್ಲಿ ವಿಶ್ವಕಲಾ ರೈತ ನಾಟ್ಯ ಸಂಘ ಹಾಗೂ ಕನಕೇಶ್ವರ ಯುವಕರ ಕಲಾ ಸಂಘವನ್ನು ಕಟ್ಟಿದ್ದರು. 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದರು.
ವೇದಮೂರ್ತಿ ಕೊಟ್ರಯ್ಯ ಗವಾಯಿ ಶಿಷ್ಯರಾಗಿ, ಸಂಗೀತ ಕಲಾವಿದರಾಗಿದ್ದ ತಂದೆ ನಾಗೇಂದ್ರಪ್ಪ ಅವರ ಗರಡಿಯಲ್ಲಿ ಪಳಗಿದ್ದ ಷಡಾಕ್ಷರಪ್ಪ ಬಯಲಾಟ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲೂ ಅಭಿನಯಿಸಿದ್ದರು. ‘ಸಾವಿರಾರು ನಾಟಕಗಳ ಸರದಾರ’ ಎಂದೇ ಹೆಸರಾಗಿದ್ದರು. ಶ್ರೀಯುತರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.