ಉಡುಪಿ : ಅಂಬಲಪಾಡಿಯ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಇವರ ಆಶ್ರಯದಲ್ಲಿ ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ರಂಗ ತರಬೇತಿ ಶಿಬಿರ 2025’ವನ್ನು ದಿನಾಂಕ 12 ಏಪ್ರಿಲ್ 2025ರಿಂದ 20 ಏಪ್ರಿಲ್ 2025ರವರೆಗೆ ಪ್ರತಿದಿನ ಬೆಳಗ್ಗೆ 8-45ರಿಂದ ಮಧ್ಯಾಹ್ನ 1-00 ಗಂಟೆ ತನಕ ಅಂಬಲಪಾಡಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೊದಲು ನೋಂದಾಯಿಸಿದ 50 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ನೋಂದಣಿ ಶುಲ್ಕ ರೂ.100/- ಆಗಿರುತ್ತದೆ. ನೋಂದಾವಣೆ ಶುಲ್ಕವನ್ನು 7795291485 ಸಂಖ್ಯೆಗೆ ಗೂಗಲ್ ಪೇ ಮಾಡಿ ಹಾಗೂ ಶಿಬಿರಾರ್ಥಿಯ ವಿವರ ಮತ್ತು ಪಾವತಿಯ ಮಾಹಿತಿಯನ್ನು ಅದೇ ಸಂಖ್ಯೆಗೆ ಕಳುಹಿಸಿ.