ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ಸಹಜ ರಂಗ 2025’ ಕಾಲೇಜು ವಿದ್ಯಾರ್ಥಿಗಳಿಗೆ ‘ರಂಗ ತರಬೇತಿ ಶಿಬಿರ’ವನ್ನು ದಿನಾಂಕ 15 ಆಗಸ್ಟ್ 2025ರಿಂದ 18 ಸೆಪ್ಟೆಂಬರ್ 2025ರವರೆಗೆ ಪ್ರತಿದಿನ ಸಂಜೆ 4-45ರಿಂದ 8-30 ಗಂಟೆವರೆಗೆ ಮೈಸೂರಿನ ಮಾನಸಗಂಗೋತ್ರಿ ಗಾಂಧಿಭವನ ಆವರಣದಲ್ಲಿ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ನಡೆಸುವ ಈ ಶಿಬಿರದಲ್ಲಿ 40 ಶಿಬಿರಾರ್ಥಿಗಳಿಗೆ ಅವಕಾಶವಿದ್ದು, ಅರ್ಜಿ ಸಲ್ಲಿಸಲು 13 ಆಗಸ್ಟ್ 2025 ಕಡೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 0821-2544990, 96110 74424, 99802 73167, 89517 55267, 90364 64631 ಸಂಖ್ಯೆಯನ್ನು ಸಂಪರ್ಕಿಸಿರಿ.