ಪೆರ್ಮುದೆ : ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯ ಬಜ್ಪೆ ಪೆರ್ಮುದೆ ಇದರ ತೃತೀಯ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಗೌರವಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೆರ್ಮುದೆ ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಉಲ್ಲಾಸ್ ಆರ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಪರ್ವದಲ್ಲಿ ಖ್ಯಾತ ಹಿರಿಯ ಮದ್ದಳೆ ಗಾರರಾದ ಶ್ರೀ ಮಣಿ ಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಗುರುಗಳಾದ ಶ್ರೀ ರಾಜೇಶ್ ಕಟೀಲು ಇವರಿಗೆ ಗುರುವಂದನೆ ಮಾಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯದ ಸದಸ್ಯರಿಂದ ‘ಶ್ರೀ ದೇವಿ ಮಹಿಷ ಮರ್ದಿನಿ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.