ಮಂಗಳೂರು : ಮಕ್ಕಳಿಗೆ ಯಕ್ಷಗಾನ ಕಲಿಸುವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ನಿಟ್ಟಿನಲ್ಲಿ ಯಕ್ಷಧ್ರುವ- ಯಕ್ಷಶಿಕ್ಷಣವು ಮುಲ್ಲಕಾಡು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ದಿನಾಂಕ 04 ಜುಲೈ 2025ರಂದು ಉದ್ಘಾಟನೆಗೊಂಡಿತು. ಮೂರನೇ ವರ್ಷದ ಯಕ್ಷ ಶಿಕ್ಷಣವನ್ನು ಮಂಗಳೂರು ಪಟ್ಲ ಪೌಂಡೇಶನ್ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿ “ಯಕ್ಷಗಾನವು ಪಠ್ಯದ ಒಂದು ಅಧ್ಯಾಯವಾಗಿ ಮಕ್ಕಳಿಗೆ ಭೋದನೆಯಾಗಬೇಕು” ಎಂದು ಆಗ್ರಹಿಸಿದರು.
ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ, ರುವಾರಿ ಪಣಂಬೂರು ಶ್ರೀ ವಾಸುದೇವ ಐತಾಳ್ ಪ್ರಸ್ತಾವನೆಗೈದು, “ಯಕ್ಷಗಾನ ಮಕ್ಕಳ ಮಾನಸಿಕ ದೃಡತೆಯೊಂದಿಗೆ ಏಕಾಗ್ರತೆ ಹೆಚ್ಚಿಸಿ ಮಕ್ಕಳು ಉತ್ತಮ ಅಂಕ ಪಡೆಯಲು ಸಹಕಾರಿಯಾಗುತ್ತದೆ. ಮುಲ್ಲಕಾಡು ಶಾಲೆಯಲ್ಲಿ ಯಕ್ಷ ಶಿಕ್ಷಣ ಪಡೆದು ಶಾಲಾ ವ್ಯಾಸಂಗದಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಬಾಲಕಿ ಕುಮಾರಿ ಸುಜಾತ ಮಾದರಿ” ಎಂದು ತಿಳಿಸಿದರು.
ಸಭೆಯ ಅಧ್ಯಕ್ಷೆ ಹಾಗೂ ಶಾಲಾ ಎಸ್.ಡಿ.ಸಿ. ಅಧ್ಯಕ್ಷೆ ಶ್ರೀಮತಿ ಗೀತಾ ಶೆಟ್ಟಿ ಮಾತನಾಡಿ ಯಕ್ಷ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿರುವ ಶಾಲಾ ಮುಖ್ಯೋಪಾದ್ಯರಾದ ಶ್ರೀ ಉಸ್ಮಾನ್ ಇವರಿಗೆ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಳೆದ ಸಲ ನಡೆದ ಶಾಲಾಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದ ಯಕ್ಷಗಾನ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಿದ ಯಕ್ಷ ಶಿಕ್ಷಕ ರಾಕೇಶ್ ರೈ ಅಡ್ಕ ಇವರನ್ನು ಸನ್ಮಾನಿಸಲಾಯಿತು. ಮುಖ್ಯೋಪಾದ್ಯಯರಾದ ಶ್ರೀ ಜಿ. ಉಸ್ಮಾನ್ ಇವರು ಸ್ವಾಗತಿಸಿದರು. ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರದೀಪ್ ಆಳ್ವ ಕದ್ರಿ, ಜೊತೆ ಕೋಶಾದಿಕಾರಿ ಶ್ರೀ ರವಿಚಂದ್ರ ಶೆಟ್ಟಿ ಅಶೋಕನಗರ, ಮಂಗಳೂರು ಘಟಕದ ಕೋಶಾಧಿಕಾರಿ ಶ್ರೀ ಗೋಪಿನಾಥ್ ಶೆಟ್ಟಿ ಹಾಗೂ ಸದಸ್ಯರಾದ ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಸಂತೋಷ್ ರೈ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟರಮಣ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ನಾಗೇಶ್ ಕಾರ್ವಿ ನಿರೂಪಿಸಿ, ಶ್ರೀ ನಾಗೇಶ್ ಕಾರ್ವಿ ವಂದನಾರ್ಪಣೆಗೈದರು.